ADVERTISEMENT

ಮಾಧುಸ್ವಾಮಿ ಕ್ಷಮೆಯಾಚನೆಗೆ ಕುರುಬರ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 12:25 IST
Last Updated 19 ನವೆಂಬರ್ 2019, 12:25 IST
ಶಿವಮೊಗ್ಗದಲ್ಲಿ ಶನಿವಾರ ಮಲೆನಾಡು ಕುರುಬರ ವೇದಿಕೆ ಸದಸ್ಯರು ಸಚಿವ ಮಾಧುಸ್ವಾಮಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ವೇದಿಕೆ ಮುಖಂಡರಾದ ಎಸ್.ಎಂ.ಶರತ್, ಸಿ.ಜಿ.ಮಧುಸೂದನ್, ವಿಜಯ್, ಯೋಗೀಶ್, ನಿತಿನ್, ಸಂತೋಷ್‌, ಕೇಶವ ಇದ್ದಾರೆ. 
ಶಿವಮೊಗ್ಗದಲ್ಲಿ ಶನಿವಾರ ಮಲೆನಾಡು ಕುರುಬರ ವೇದಿಕೆ ಸದಸ್ಯರು ಸಚಿವ ಮಾಧುಸ್ವಾಮಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ವೇದಿಕೆ ಮುಖಂಡರಾದ ಎಸ್.ಎಂ.ಶರತ್, ಸಿ.ಜಿ.ಮಧುಸೂದನ್, ವಿಜಯ್, ಯೋಗೀಶ್, ನಿತಿನ್, ಸಂತೋಷ್‌, ಕೇಶವ ಇದ್ದಾರೆ.    

ಶಿವಮೊಗ್ಗ: ಕಾನೂನು ಸಚಿವ ಮಾಧುಸ್ವಾಮಿ ಕನಕ ಗುರುಪೀಠದ ಶ್ರೀಗಳಿಗೆ ಧಮಕಿ ಹಾಕುವ ಮೂಲಕ ಉದ್ಧಟತನ ತೋರಿದ್ದಾರೆ. ತಕ್ಷಣ ಅವರು ಶ್ರೀಗಳ ಕ್ಷಮೆಯಾಚಿಸಬೇಕುಎಂದುಕರ್ನಾಟಕಪ್ರದೇಶ ಕುರುಬರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಕೆ.ರಂಗನಾಥ್ಆಗ್ರಹಿಸಿದರು.

ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಹುಳಿಯಾರಿನಲ್ಲಿವೃತ್ತಕ್ಕೆ 2006ರಲ್ಲಿ ಕನಕದಾಸರ ವೃತ್ತ ಎಂದು ನಾಮಕರಣ ಮಾಡಲಾಗಿತ್ತು. ಈಚೆಗೆ ರಸ್ತೆ ವಿಸ್ತರಣೆ ಸಮಯದಲ್ಲಿಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ವೃತ್ತ ಎಂದು ನಾಮಕರಣ ಮಾಡಲು ಒತ್ತಾಯ ಕೇಳಿಬಂದಿದಿತ್ತು.ಆಗಕನಕ ಪೀಠದಶ್ರೀಗಳುಬೇರೊಂದು ವೃತ್ತಕ್ಕೆ ಶಿವಕುಮಾರ ಸ್ವಾಮೀಜಿ ವೃತ್ತ ಎಂದು ನಾಮಕರಣ ಮಾಡಲು ಸಲಹೆ ನೀಡಿದ್ದರು.ಆಗಸಚಿವ ಮಾಧುಸ್ವಾಮಿ ಏರು ಧ್ವನಿಯಲ್ಲಿ ಶ್ರೀಗಳ ಕಡೆ ಕೈ ತೋರಿಸುತ್ತಾ ಧಮಕಿ ಹಾಕಿದ್ದಾರೆಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಅವರು ಶ್ರೀಗಳ ಕ್ಷಮೆಯಾಚಿಸಬೇಕು. ಸಂಪುಟದಿಂದ ಕೈಬಿಡಬೇಕು. ಇಲ್ಲದಿದ್ದರೆ ರಾಜ್ಯದ ಎಲ್ಲೆಡೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಸಂಗೊಳ್ಳಿ ರಾಯಣ್ಣ ಕುರಿಬರ ವೇದಿಕೆ ಅಧ್ಯಕ್ಷ ರಾಮಕೃಷ್ಣ ಮೂಡ್ಲಿ, ಸಮಾಜದ ಮುಖಂಡರಾದ ವಾಟಾಳ್ ಮಂಜುನಾಥ್, ಶ್ರೀನಿವಾಸ್ ವಡ್ಡಪ್ಪ, ಚಂದ್ರು, ರಾಮಿನಕೊಪ್ಪ ರಘುಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.