ADVERTISEMENT

ಶಿವಮೊಗ್ಗ: ಮಣ್ಣು ಕುಸಿತ; ಬಾಳೆಬರೆ ಘಾಟ್‌ನಲ್ಲಿ ಸಂಚಾರ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 4:38 IST
Last Updated 8 ಆಗಸ್ಟ್ 2025, 4:38 IST
<div class="paragraphs"><p>ರಸ್ತೆ</p></div>

ರಸ್ತೆ

   

ಶಿವಮೊಗ್ಗ: ‘ತೀರ್ಥಹಳ್ಳಿ ಕುಂದಾಪುರ ರಾಜ್ಯ ಹೆದ್ದಾರಿ– 52 ಬಾಳೆಬರೆ (ಹುಲಿಕಲ್) ಘಾಟ್‌ನಲ್ಲಿ ಮಣ್ಣು ಕುಸಿತ ಉಂಟಾಗಿದೆ. ಸುರಕ್ಷತೆ ದೃಷ್ಟಿಯಿಂದ (ಮಾಸ್ತಿಕಟ್ಟೆಯಿಂದ ಹೊಸಂಗಡಿಯವರೆಗೆ) ಮಳೆಗಾಲ ಮುಗಿಯುವವರೆಗೆ  ತಾತ್ಕಾಲಿಕವಾಗಿ ಭಾರಿ ಗಾತ್ರದ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ.

ಪರ್ಯಾಯ ಮಾರ್ಗ: ತೀರ್ಥಹಳ್ಳಿಯಿಂದ ರಾವೆ– ಕಾನಗೋಡು– ಮಾಸ್ತಿಕಟ್ಟೆ– ಹುಲಿಕಲ್ ಘಾಟ್– ಹೊಸಂಗಡಿ– ಸಿದ್ದಾಪುರ ಮೂಲಕ ಕುಂದಾಪುರದ ಕಡೆಗೆ ಹೋಗುವ ಭಾರಿ ವಾಹನಗಳು ತೀರ್ಥಹಳ್ಳಿ– ರಾವೆ– ಕಾನುಗೋಡು– ನಗರ– ಕೊಲ್ಲೂರು– ಕುಂದಾಪುರ ರಸ್ತೆ ಮೂಲಕ ಸಂಚರಿಸಬೇಕು. 

ADVERTISEMENT

ನಗರ ಸಿದ್ದಾಪುರ ರಾಜ್ಯ ಹೆದ್ದಾರಿ– 278 ರಸ್ತೆ ತೀರ್ಥಹಳ್ಳಿಯಿಂದ ಯಡೂರು– ಸುಳಗೋಡು– ಮಾಸ್ತಿಕಟ್ಟೆ– ಹುಲಿಕಲ್ ಘಾಟ್– ಹೊಸಂಗಡಿ– ಸಿದ್ದಾಪುರ ಮೂಲಕ ಕುಂದಾಪುರದ ಕಡೆಗೆ ಹೋಗುವ ಭಾರಿ ವಾಹನಗಳು ತೀರ್ಥಹಳ್ಳಿ– ಯಡೂರು– ಮಾಸ್ತಿಕಟ್ಟೆ– ಕಾನುಗೋಡು– ನಗರ– ಕೊಲ್ಲೂರು– ಕುಂದಾಪುರ ರಸ್ತೆ ಮೂಲಕ ಸಂಚರಿಸಬೇಕು.

ಶಿವಮೊಗ್ಗ, ಸಾಗರ ಕಡೆಯಿಂದ ಹೊಸನಗರ– ನಗರ– ಮಾಸ್ತಿಕಟ್ಟೆ– ಹುಲಿಕಲ್ ಘಾಟ್– ಹೊಸಂಗಡಿ– ಸಿದ್ದಾಪುರ ಮೂಲಕ ಕುಂದಾಪುರದ ಕಡೆ ಹೋಗುವ ಭಾರಿ ವಾಹನಗಳು ಶಿವಮೊಗ್ಗ ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಮೂಲಕ ಹೊನ್ನಾವರ ಆನಂತರ ಹೊನ್ನಾವರದಿಂದ ಭಟ್ಕಳ– ಬೈಂದೂರು– ಕುಂದಾಪುರ ರಸ್ತೆಯ ಮೂಲಕ ಸಂಚರಿಸಲು ಬದಲಿ ಮಾರ್ಗ ಕಲ್ಪಿಸಿ ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.