ADVERTISEMENT

ಕ್ರಸ್ಟ್ ಗೇಟ್ ಮಟ್ಟ ತಲುಪಿದ ಲಿಂಗನಮಕ್ಕಿ ಅಣೆಕಟ್ಟೆ ಜಲಮಟ್ಟ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 6:03 IST
Last Updated 23 ಜುಲೈ 2021, 6:03 IST
ಲಿಂಗನಮಕ್ಕಿ ಜಲಾಶಯ ಗುರುವಾರ ಕ್ರಸ್ಟ್ ಗೇಟ್ ಮಟ್ಟ ತಲುಪಿರುವುದು (ಎಡಚಿತ್ರ). ಶಿಕಾರಿಪುರ ತಾಲ್ಲೂಕಿನ ಅಂಬ್ಲಿಗೊಳ್ಳ ಜಲಾಶಯ ಭರ್ತಿಯಾಗಿ ಉಕ್ಕಿ ಹರಿಯುತ್ತಿದ್ದು, ಮೀನು ಪ್ರಿಯರು ಹಿಡಿಯಲು ಕುಣಿ ಹಿಡಿದು ಹರಸಾಹಸ ಪಟ್ಟರು
ಲಿಂಗನಮಕ್ಕಿ ಜಲಾಶಯ ಗುರುವಾರ ಕ್ರಸ್ಟ್ ಗೇಟ್ ಮಟ್ಟ ತಲುಪಿರುವುದು (ಎಡಚಿತ್ರ). ಶಿಕಾರಿಪುರ ತಾಲ್ಲೂಕಿನ ಅಂಬ್ಲಿಗೊಳ್ಳ ಜಲಾಶಯ ಭರ್ತಿಯಾಗಿ ಉಕ್ಕಿ ಹರಿಯುತ್ತಿದ್ದು, ಮೀನು ಪ್ರಿಯರು ಹಿಡಿಯಲು ಕುಣಿ ಹಿಡಿದು ಹರಸಾಹಸ ಪಟ್ಟರು   

ಕಾರ್ಗಲ್: ನಿರಂತರ ಮಳೆಯಿಂದಾಗಿ ಲಿಂಗನಮಕ್ಕಿ ಅಣೆಕಟ್ಟೆಗೆ ನೀರು ಹರಿದುಬರುತ್ತಿದ್ದು, ನೀರಿನ ಮಟ್ಟ ಕ್ರಸ್ಟ್ ಗೇಟ್ ತಳಮಟ್ಟ ದಾಟಿದೆ. (1,796.60 ಅಡಿ)

‘1,819 ಅಡಿ ಗರಿಷ್ಠ ಮಟ್ಟ ಜಲಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ 1,795 ಅಡಿಯನ್ನು ಬೆಡ್ ಲೆವೆಲ್ ಎಂದು ಗುರುತಿಸಲಾಗಿದೆ. ಈ ಮಟ್ಟದಲ್ಲಿ ಭರ್ತಿಯಾದ ನೀರು ಅಣೆಕಟ್ಟೆಯ ಅರ್ಧ ಭಾಗದ ಸಾಮರ್ಥ್ಯ ಹೊಂದಿರುತ್ತದೆ. ಅಣೆಕಟ್ಟೆ ಭರ್ತಿಯಾಗಬೇಕಾದರೆ ಇನ್ನೂ 22.40 ಅಡಿಗಳಷ್ಟು ನೀರು ಸಂಗ್ರಹ ಆಗಬೇಕಾದ ಅಗತ್ಯವಿದೆ’ ಎಂದು ಕೆಪಿಸಿ ಮುಖ್ಯ ಎಂಜಿನಿಯರ್ ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದರು.

‘ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ 99.4 ಮಿ.ಮೀ. ಮಳೆಯಾಗಿದ್ದು, ಜಲಾಶಯದ ಒಳಹರಿವು 45,458 ಕ್ಯುಸೆಕ್ ಇದ್ದು, 2,176 ಕ್ಯುಸೆಕ್ ಹೊರಹರಿವು ಇದೆ’ ಎಂದು ಜಲಾಶಯ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್
ಆರ್. ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.