ಸೊರಬ: ಸದೃಢ ದೇಶ ನಿರ್ಮಾಣಕ್ಕೆ ಮಹಾತ್ಮ ಗಾಂಧೀಜಿ ಅವರು ತಮ್ಮ ನಿಸ್ವಾರ್ಥ ಸೇವೆ ಮೂಲಕ ಭವಿಷ್ಯದ ಜನಾಂಗಕ್ಕೆ ಮಾದರಿಯಾಗಿದ್ದಾರೆ ಎಂದು ಸಮಾಜ ಸೇವಕ ಜ್ಞಾನೇಶ್ ಹೇಳಿದರು.
ಬುಧವಾರ ಪಟ್ಟಣದ ಸಾಯಿ ವೃದ್ಧಶ್ರಾಮದಲ್ಲಿ ನಡೆದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜಯಂತ್ಯುತ್ಸವ ಕಾರ್ಯಕ್ರಮ ಅವರು ಮಾತನಾಡಿದರು.
ಗ್ರಾಮ ಸ್ವರಾಜ್ಯದ ಕನಸು ಕಂಡ ಗಾಂಧೀಜಿ ತಮ್ಮ ಜೀವಮಾನದುದ್ದಕ್ಕೂ ಬಡವರ, ಶೋಷಿತರ ಪರವಾಗಿ ಹಾಗೂ ವರ್ಣಬೇಧ ನೀತಿಯ ವಿರುದ್ಧ ಹೋರಾಟ ಮಾಡಿದರು. ಇಂದಿನ ರಾಜಕಾರಣಿಗಳು ಗಾಂಧೀಜಿ ಅವರ ತತ್ವ, ಆದರ್ಶ ಪಾಲಿಸಿ ಆಡಳಿತ ನಡೆಸಿದಾಗ ಜನರಿಗೆ ಸಮಾನ ಅವಕಾಶಗಳು ದೊರೆಯಲು ಸಾಧ್ಯವಿದೆ ಎಂದರು.
ಸಂಸ್ಥೆ ಕಾರ್ಯದರ್ಶಿ ಜಿ.ಬಿ. ರಾಮಪ್ಪ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕರಾದ ಕೃಷ್ಣಾನಂದ, ಮೋಹನದಾಸ್, ಅಶೋಕ ಟೇಮ್ಕರ್, ದಶ್ವಂತ್, ರವೀಂದ್ರ, ಗಾಯತ್ರಿ ನಾಯಕ್, ತೇಜಪ್ಪ, ಮಂಗಳಾ,ಪಲ್ಲವಿ,ಚೇತನಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.