ADVERTISEMENT

ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ: 748 ಕಾಮಗಾರಿ ಪೂರ್ಣ‌

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 6:55 IST
Last Updated 14 ಜುಲೈ 2021, 6:55 IST
ಶಿವಮೊಗ್ಗ ನಗರದಲ್ಲಿರುವ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಮಂಗಳವಾರ ಪ್ರಗತಿ ಪರಿಶೀಲನೆಗೆ ಸಂಬಂಧಿಸಿದಂತೆ ವಿಡಿಯೊ ಸಂವಾದ ನಡೆಯಿತು.
ಶಿವಮೊಗ್ಗ ನಗರದಲ್ಲಿರುವ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಮಂಗಳವಾರ ಪ್ರಗತಿ ಪರಿಶೀಲನೆಗೆ ಸಂಬಂಧಿಸಿದಂತೆ ವಿಡಿಯೊ ಸಂವಾದ ನಡೆಯಿತು.   

ಶಿವಮೊಗ್ಗ: ‘ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ₹ 51.67 ಕೋಟಿ ಮೊತ್ತದ ಪ್ರಗತಿ ಸಾಧಿಸಿ, 748 ಕಾಮಗಾರಿ ಪೂರ್ಣಗೊಳಿಸಲಾಗಿದೆ’ ಎಂದು ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ತಿಳಿಸಿದರು.

ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆಗೆ ಸಂಬಂಧಿಸಿದಂತೆ ವಿಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.

2019-20ನೇ ಸಾಲಿಗೆ ಮುಂದುವರಿದ 1,397 ಕಾಮಗಾರಿಗಳು ಬಾಕಿ ಉಳಿದಿದ್ದು, ಕಳೆದ ಸಾಲಿನ 8 ಜಿಲ್ಲೆಗಳಲ್ಲಿ ಖುದ್ದು ಪ್ರವಾಸ ನಡೆಸಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಕೂಡಲೇ ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಈ ಬಾರಿ ಬಾಕಿ ಕಾಮಗಾರಿಗಳಲ್ಲಿ ಶೇ 77ರಷ್ಟು ಹಾಗೂ ₹ 51.67 ಕೋಟಿ ಮೊತ್ತದ ಪ್ರಗತಿ ಸಾಧಿಸಿ 748 ಕಾಮಾಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಬೆಳಗಾವಿ– 74, ಚಾಮರಾಜನಗರ– 17, ದಾವಣಗೆರೆ– 33, ಚಿಕ್ಕಮಗಳೂರು– 32, ಧಾರವಾಡ– 46, ಹಾಸನ– 31, ಹಾವೇರಿ– 25, ಕೊಡಗು–12, ಮಂಗಳೂರು–92, ಮೈಸೂರು–75, ಶಿವಮೊಗ್ಗ– 75, ಉಡುಪಿ–68 ಹಾಗೂ ಉತ್ತರ ಕನ್ನಡ– 88 ಕಾಮಗಾರಿಗಳು ಬಾಕಿ ಉಳಿದಿವೆ ಎಂದು ‌ಮಾಹಿತಿ ನೀಡಿದರು.

ಸಭೆಯಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಕೆ.ಎಸ್.ಮಣಿ, ಎಂಜಿನಿಯರ್ ವಿಜಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.