ADVERTISEMENT

ಶಿವಮೊಗ್ಗ ಮಾರಿಕಾಂಬಾ ಜಾತ್ರೆಗೆ ಅಧಿಕೃತ ಚಾಲನೆ

ಆವರಣದಲ್ಲಿ ಸಾರು (ಅಂಕೆ) ಹಾಕಿದ ದೇವಸ್ಥಾನ ಸಮಿತಿ ಮುಖಂಡರು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 11:31 IST
Last Updated 18 ಫೆಬ್ರುವರಿ 2020, 11:31 IST
ಶಿವಮೊಗ್ಗ ನಗರದ ಮಾರಿಕಾಂಬಾ ಜಾತ್ರೆಗೆ ಮಂಗಳವಾರ ಸಾರು (ಅಂಕೆ) ಹಾಕುವ ಮೂಲಕ ದೇವಸ್ಥಾನ ಸಮಿತಿ ಮುಖಂಡರು ಅಧಿಕೃತ ಚಾಲನೆ ನೀಡಿದರು.
ಶಿವಮೊಗ್ಗ ನಗರದ ಮಾರಿಕಾಂಬಾ ಜಾತ್ರೆಗೆ ಮಂಗಳವಾರ ಸಾರು (ಅಂಕೆ) ಹಾಕುವ ಮೂಲಕ ದೇವಸ್ಥಾನ ಸಮಿತಿ ಮುಖಂಡರು ಅಧಿಕೃತ ಚಾಲನೆ ನೀಡಿದರು.   

ಶಿವಮೊಗ್ಗ: ನಗರದ ಕೋಟೆ ಮಾರಿಕಾಂಬಾ ದೇವಿಯ ಜಾತ್ರೆಗೆ ಮಂಗಳವಾರ ಸಾರು (ಅಂಕೆ) ಹಾಕುವ ಮೂಲಕ ಅಧಿಕೃತ ಚಾಲನೆ ನೀಡಲಾಯಿತು.

ಕೋಟೆ ಮಾರಿಕಾಂಬಾ ಸೇವಾ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ,ಪದಾಧಿಕಾರಿಗಳು ದೇವಸ್ಥಾನದ ಆವರಣದಲ್ಲಿ ಸಾರು ಹಾಕಿದರು. ಪೂಜೆಯ ನಂತರ ಜಾತ್ರೆಯ ಪ್ರಚಾರಕ್ಕಾಗಿ ಐದು ಆಟೊರಿಕ್ಷಾಗಳುಧ್ವನಿಮುದ್ರಿತಸಂದೇಶ ಸಾರುತ್ತಾ ನಗರ ಸಂಚಾರಕ್ಕೆ ತೆರಳಿದವು. ಈ ಆಟೊರಿಕ್ಷಾಗಳಲ್ಲಿಹಲಗೆ ಬಡಿಯುವವರೂತೆರಳಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿದದೇವಸ್ಥಾನದ ಸಮಿತಿ ಅಧ್ಯಕ್ಷ ಎಸ್.ಕೆ. ಮರಿಯಪ್ಪ, ಕಾರ್ಯದರ್ಶಿಎನ್. ಮಂಜುನಾಥ್, ಜಾತ್ರಾ ಸಿದ್ಧತೆಗಳು ಪೂರ್ಣಗೊಂಡಿವೆ. ಫೆ. 25ರಿಂದ 29ರವರೆಗೆ ನಡೆಯುವ 5 ದಿನಗಳ ಜಾತ್ರೆಗೆಇಡೀ ನಗರ ಅಲಂಕರಿಸಲಾಗುವುದು. ವೀರಭದ್ರೇಶ್ವರ ಟಾಕೀಸ್, ಕುವೆಂಪು ರಸ್ತೆ, ನೆಹರೂ ರಸ್ತೆ ಸೇರಿದಂತೆಹಲವರಡೆಸುಮಾರು 250ಕ್ಕೂ ಹೆಚ್ಚು ಮರಗಳಿಗೆ ವಿದ್ಯುತ್ ಅಲಂಕಾರ ಮಾಡಲಾಗುವುದು. ವಿಶೇಷವಾಗಿ ಅರಳೀಮರಗಳಿಗೆ ಆದ್ಯತೆ ನೀಡಲಾಗುವುದು ಎಂದರು.

ADVERTISEMENT

ದೇವಸ್ಥಾನದಿಂದ ಗಾಂಧಿಬಜಾರ್ ರಸ್ತೆ, ಶಿವಪ್ಪ ನಾಯಕ ಪ್ರತಿಮೆಯವರೆಗೂ ಶಾಮೀಯಾನ ಹಾಕಿಸಲಾಗುವುದು.ಸಂಘ-ಸಂಸ್ಥೆಗಳ ನೆರವು ಪಡೆದು ಎಲ್ಲೆಡೆ ಕುಡಿಯುವ ನೀರು, ಪಾನಕ, ಮಜ್ಜಿಗೆ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ.ಶಕ್ತಿ ದೇವತೆಯ ಅಲಂಕಾರನಡೆದಿದೆ. ಪ್ರತಿದಿನ ಸೀರೆ ತೊಡಿಸಲಾಗುವುದು, ದೊಡ್ಡ ವಿಗ್ರಹವಾದ ಕಾರಣ ಎರಡು ಸೀರೆಗಳನ್ನು ಸೇರಿಸಿ ತೊಡಿಸಲಾಗುತ್ತದೆ. ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ ಎಮದು ವಿವರ ನೀಡಿದರು.

ಶಕ್ತಿ ದೇವತೆಯ ಉತ್ಸವ ಯಶಸ್ವಿಯಾಗಲುಹಲವು ಸಮಿತಿಗಳನ್ನು ರಚಿಸಲಾಗಿದೆ. ಬ್ರಾಹ್ಮಣ, ಉಪ್ಪಾರ, ಗಂಗಾಮತ,ಪರಿಶಿಷ್ಟರೂ ಸೇರಿ ಎಲ್ಲ ವರ್ಗದ ಮುಖ್ಯಸ್ಥರಿಗೆ ವಿಶೇಷ ಆಹ್ವಾನ ನೀಡಲಾಗಿದೆ.ತವರು ಮನೆ ಗಾಂಧಿಬಜಾರಿನಲ್ಲಿ ಕಾರ್ಯಕ್ರಮಕ್ಕಾಗಿ ಸಿದ್ಧತೆ ನಡೆಸಲಾಗಿದೆ ಎಂದರು.

ಪಾರ್ಕಿಂಗ್, ಶೌಚಾಲಯ ವ್ಯವಸ್ಥೆ:

ಪೊಲೀಸರ ಸಹಕಾರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ದೇವಸ್ಥಾನದ ಸುತ್ತಮುತ್ತ ಪಾರ್ಕಿಂಗ್ವ್ಯವಸ್ಥೆ ಇಲ್ಲ. ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಬೇವಿನ ಉಡುಗೆ ಇರುತ್ತದೆ. ಬೇವಿನ ಉಡುಗೆ ತೊಟ್ಟವರಿಗೆ ಸ್ನಾನಮಾಡಲು ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 11ರ ತನಕ ನಗರ ಸಾರಿಗೆ ಬಸ್‌ ಸಂಚರಿಸುವ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಆವರಣದಲ್ಲಿ ಮೊಬೈಲ್ ಚಿಕಿತ್ಸಾ ಕೇಂದ್ರವಿರುತ್ತದೆ. ಅಂಬುಲೆನ್ಸ್ ಇರುತ್ತದೆಎಂದು ಮಾಹಿತಿ ನೀಡಿದರು.

ದೇವಸ್ಥಾನ ಸಮಿತಿ ಮುಖಂಡರಾದವಿ.ರಾಜು, ಡಿ.ಎಂ.ರಾಮಯ್ಯ, ಎಸ್.ಸಿ.ಲೋಕೇಶ್, ತಿಮ್ಮಯ್ಯ, ಎನ್.ಉಮಾಪತಿ, ಸತ್ಯನಾರಾಯಣ್, ಪ್ರಭಾಕರ ಗೌಡ, ಶ್ರೀಧರ ಮೂರ್ತಿ ನವುಲೆ, ಸುನೀಲ್, ಎನ್.ರವಿಕುಮಾರ್, ನಟರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.