ಶಿಕಾರಿಪುರ: ಮಕ್ಕಳ ಮಾನಸಿಕ, ದೈಹಿಕ ಪ್ರಗತಿಗೆ ಮೊಬೈಲ್ ಮಾರಕವಾಗಿ ಪರಿಣಮಿಸುತ್ತಿದೆ ಎಂದು ವೈದ್ಯ ಮಾಲತೇಶ್ ಹೇಳಿದರು.
ತಾಲ್ಲೂಕಿನ ಮುಡಬಸಿದ್ದಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ವಿಶ್ವ ಯೋಗದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳೂ ಮೊಬೈಲ್ ಗೀಳಿಗೆ ಒಳಗಾಗುತ್ತಿರುವುದು ಕಳವಳಕಾರಿ. ದೈಹಿಕ, ಮಾನಸಿಕ ರೋಗಗಳು ಮಕ್ಕಳನ್ನು ಕಾಡುತ್ತಿದೆ. ಪಾಳಕರು ಮೊದಲು ಮೊಬೈಲ್ ಬಿಡುವುದೇ ಇದಕ್ಕಿರುವ ಸರಳ ಪರಿಹಾರ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ್, ಮುಖ್ಯಶಿಕ್ಷಕ ಫಕ್ಕೀರಪ್ಪ, ಶಿಕ್ಷಕರಾದ ರಂಗನಾಥ್, ಬಸವಣ್ಯೆಪ್ಪ, ಬಿ.ನಾಗರಾಜ್, ಪ್ರಕಾಶ್, ರಮೇಶನಾಯಕ್, ಗ್ರಾಮಸ್ಥರು, ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.