ADVERTISEMENT

ಮುಹಮ್ಮದ್ ಪೈಗಂಬರ್‌ ಅವಹೇಳನ: ಖಂಡನೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 3:31 IST
Last Updated 5 ನವೆಂಬರ್ 2020, 3:31 IST
ಪ್ರವಾದಿ ಮುಹಮ್ಮದ್ ಪೈಗಂಬರ್‌ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಬುಧವಾರ ಸುನ್ನಿ ಜಮಾಯತ್ ಉಲ್ ಉಲ್ಮಾ ಕಮಿಟಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರವಾದಿ ಮುಹಮ್ಮದ್ ಪೈಗಂಬರ್‌ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಬುಧವಾರ ಸುನ್ನಿ ಜಮಾಯತ್ ಉಲ್ ಉಲ್ಮಾ ಕಮಿಟಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.   

ಶಿವಮೊಗ್ಗ: ಪ್ರವಾದಿ ಮುಹಮ್ಮದ್ ಪೈಗಂಬರ್‌ ಅವರ ಬಗ್ಗೆ ಫ್ರಾನ್ಸ್ ದೇಶದ ಅಧ್ಯಕ್ಷಇಮ್ಯಾನುಯಲ್ ಮ್ಯಾಕ್ರಾನ್ ವ್ಯಂಗ್ಯಚಿತ್ರ ಮುದ್ರಿಸಿ, ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಬುಧವಾರ ಸುನ್ನಿ ಜಮಾಯತ್ ಉಲ್ ಉಲ್ಮಾ ಕಮಿಟಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ವಿಶ್ವಕ್ಕೆ ಶಾಂತಿ, ಭಾವೈಕ್ಯ, ಜಾತ್ಯತೀತ ಮೌಲ್ಯಗಳನ್ನು ವಿಸ್ತರಿಸುವ ಸೌಹಾರ್ದಕ್ಕೆ ಹೆಸರಾಗಿದ್ದಾರೆ ಇಸ್ಲಾಂ ಧರ್ಮಗುರು ಪೈಗಂಬರ್. ಇಂತಹವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ. ಆ ದೇಶದ ರಾಜತಾಂತ್ರಿಕ ವಿಚಾರದ ಬಗ್ಗೆ ಭಾರತ ಎಚ್ಚರಿಕೆ ವಹಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಪೈಗಂಬರರ ಬಗೆಗಿನ ವ್ಯಂಗ್ಯಚಿತ್ರಗಳನ್ನು ಇರಿಸಲು ಮ್ಯಾಕ್ರಾನ್ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ದೂರಿದರು.

ADVERTISEMENT

ಸಂಘಟನೆಯ ಮೌಲಾನಾ ಹಾಫೀಸ್, ಮೌಲಾನಾ ಮುಬಾರಕ್ ಹುಸೇನ್, ಮೌಲಾನಾ ಸೊಹೇಲ್ ಅಹಮ್ಮದ್, ಹಾಶಮ್, ಸಮಿತಿಯ ಪ್ರಮುಖರಾದ ಅಬ್ದುಲ್ ಸತ್ತಾರ್ ಬೇಗ್, ಎಜಾಜ್ ಪಾಷಾ, ಅಫ್ತಾಬ್ ಪರ್ವೀಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.