
ಸಾದರ ಸ್ವೀಕಾರ
ಶಿವಮೊಗ್ಗ: ‘ರೈತ ಸಂಘದ ಹರಿಕಾರ ಎನ್.ಡಿ. ಸುಂದರೇಶ್ ಒಂದು ನೆನಪು’ ಕಾರ್ಯಕ್ರಮ ಡಿ. 21ರಂದು ಬೆಳಿಗ್ಗೆ 11.30ಕ್ಕೆ ಬಿ.ಎಚ್. ರಸ್ತೆಯ ಕರ್ನಾಟಕ ಸಂಘದಲ್ಲಿ ನಡೆಯಲಿದೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಗೌಡ್ರು ಹೇಳಿದರು.
‘ಎನ್.ಡಿ. ಸುಂದರೇಶ್ ರೈತರ ಕಣ್ಮಣಿಯಾಗಿದ್ದವರು. ಅವರ ನೆನಪಿನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ನಮ್ಮ ಹೆಮ್ಮೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ನಮ್ಮ ಸಂಘ ರೈತರ ಸಮಸ್ಯೆಗಳಿಗೆ ಧ್ವನಿಯಾಗಿದೆ. ಕಾಲಕಾಲಕ್ಕೆ ರೈತರಿಗೆ ಕಾರ್ಯಾಗಾರ, ರೈತರ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುತ್ತಾ ಬಂದಿದ್ದೇವೆ’ ಎಂದರು.
‘ಎನ್.ಡಿ. ಸುಂದರೇಶ್ ನೆನಪು ಕಾರ್ಯಕ್ರಮದಲ್ಲೂ ರೈತರ ಪ್ರಚಲಿತ ಸಮಸ್ಯೆಗಳು, ಬೆಳೆ ವಿಮೆ, ಬೆಂಬಲ ಬೆಲೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು’ ಎಂದರು.
ರೈತ ಮುಖಂಡರಾದ ಎಚ್.ಪಿ.ಸತೀಶ್, ಬಿ.ಪಿ.ಅಮೃತ್, ಈಶ್ವರಪ್ಪ, ಶಫೀವುಲ್ಲಾ, ಮೊಹಮ್ಮದ್ ಅಯೂಬ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.