ಸೊರಬ: ತಾಲ್ಲೂಕಿನ ಕಪ್ಪಗಳಲೆ ಗ್ರಾಮದ ಸರ್ವೆ ನಂ. 16ರಲ್ಲಿರುವ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗುವಾನಿ ಮರಗಳನ್ನು ಕಡಿತಲೆ ಮಾಡಿ ವಾಹನದಲ್ಲಿ ಸಾಗಿಸುತ್ತಿದ್ದ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಕಪ್ಪಗಳಲೆ ಗ್ರಾಮದ ಸದಾನಂದ ಬಂಧಿತ ಆರೋಪಿ. ಇತರ ಆರೋಪಿಗಳಾದ ರವಿ, ಸುದರ್ಶನ ಹಿರೇಶಕನ, ಸುಮಂತ ಕಾನಗೋಡು ಅವರು ತಲೆಮರೆಸಿಕೊಂಡಿದ್ದಾರೆ.
ವಲಯ ಅರಣ್ಯಾಧಿಕಾರಿ ಜಾವೇದ್ ಬಾಷಾ ಅಂಗಡಿ ನೇತೃತ್ವದಲ್ಲಿ ಸಿಬ್ಬಂದಿ ಯೋಗರಾಜ ಕೆ.ಈ., ಉಪ ವಲಯ ಅರಣ್ಯಾಧಿಕಾರಿ ಶರಣಪ್ಪ, ಗಸ್ತು ಅರಣ್ಯ ಪಾಲಕರಾದ ಆನಂದ, ಅಶೋಕ ಹಾಗೂ ಅರಣ್ಯ ವೀಕ್ಷಕರಾದ ಶ್ರೀಕಾಂತ್, ಲೋಕೇಶ, ವಾಹನ ಚಾಲಕ ಮನು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.