ADVERTISEMENT

ಹಾರೋಗೊಳಿಗೆ ಗ್ರಾ.ಪಂ. ಚುನಾವಣೆ: ಹಣ, ಮದ್ಯ ಹಂಚದೇ ಇರಲು ಪ್ರಮಾಣ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 13:38 IST
Last Updated 18 ಡಿಸೆಂಬರ್ 2020, 13:38 IST

ತೀರ್ಥಹಳ್ಳಿ: ಹಾರೋಗೊಳಿಗೆ ಗ್ರಾಮ ಪಂಚಾಯ್ತಿಗೆ ಸ್ಪರ್ಧಿಸಿದ್ದ ವಿವಿಧ ರಾಜಕೀಯ ಪಕ್ಷಗಳ ಎಲ್ಲ ಎಂಟು ಅಭ್ಯರ್ಥಿಗಳು ಹರಳಿಮಠ ಗ್ರಾಮ ದೇವರಾದ ಕಲಾನಾಥೇಶ್ವರ ದೇವರ ಎದುರು ನಿಂತು ಹಣ, ಮದ್ಯ ಹಂಚದೆ ಚುನಾವಣೆ ಎದುರಿಸುವ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಅಭ್ಯರ್ಥಿಗಳಾದ ಹೊನ್ನಾನಿ ದೇವರಾಜ್, ಹೇಮರಾಜ್, ಮಯದ್ದಿ, ಪ್ರಹ್ಲಾದ್, ಮಂಜುನಾಥ್, ಇಂದಿರಮ್ಮ, ನೇತ್ರಾವತಿ ಮತ್ತು ಅಮಿತಾ ಅವರು ಕಲಾನಾಥೇಶ್ವರ ದೇವರ ಮುಂದೆ ಪ್ರಮಾಣ ಮಾಡಿದರು. ಅಭ್ಯರ್ಥಿಗಳ ಪರ ಸ್ನೇಹಿತರು, ಅಭಿಮಾನಿಗಳು, ಬಂಧುಗಳೂ ಪ್ರಚಾರದ ನೆಪದಲ್ಲಿ ಹಣ ಮತ್ತು ಹೆಂಡ ಹಂಚುವ ಕಾಯಕದಲ್ಲಿ ತೊಡಗುವುದಿಲ್ಲ ಎಂದೂ ಘೋಷಿಸಿದರು.

ತೆಗೆದುಕೊಂಡ ಪ್ರಮಾಣಕ್ಕೆ ಅರ್ಚಕ ಸರ್ಜಾ ಶೇಷಗಿರಿಯಪ್ಪ, ಗ್ರಾಮಸ್ಥರು ಸಾಕ್ಷೀ ಭೂತರಾದರು.

ADVERTISEMENT

ಹಿಂದಿನ ಚುನಾವಣೆಯಲ್ಲೂ ಅಭ್ಯರ್ಥಿಗಳು ಒಟ್ಟಾಗಿ ಮಹಾಲಿಂಗೇಶ್ವರ ದೇವರ ಮುಂದೆ ಹಣ, ಹೆಂಡ ಹಂಚದಿರುವ ಪ್ರಮಾಣ ಮಾಡಿದ್ದರು. ಹಾಗೆಯೇ ನಡೆದುಕೊಂಡು ಮಾದರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.