ADVERTISEMENT

ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 4:16 IST
Last Updated 13 ನವೆಂಬರ್ 2025, 4:16 IST


ಶಿವಮೊಗ್ಗ:
ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ತಡೆಯಾಜ್ಞೆ ಜಾರಿಗೊಳಿಸಿ, ಬಹುಹಂತದ ಕಾರ್ ಪಾರ್ಕಿಂಗ್ ಕಟ್ಟಡದಲ್ಲಿ ವಾಹನಗಳ ಪಾರ್ಕಿಂಗ್ಗೆ ಕ್ರಮಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದ್ದಾರೆ.


 ನಗರದ ಪ್ರಮುಖ ರಸ್ತೆಗಳಾದ ಬಿಹೆಚ್ ರಸ್ತೆ(ರಾಯಲ್ ಆರ್ಕಿಡ್ ಯಿಂದ ಕರ್ನಾಟಕ ಸಂಘ ಸಿಗ್ನಲ್‌ವರೆಗೆ) ಶಿವಪ್ಪನಾಯಕ ಪ್ರತಿಮೆಯಿಂದ ಗಾಂಧಿ ಬಜಾರ್ ನಾಲ್ಕನೇ ಅಡ್ಡರಸ್ತೆವರೆಗೆ, ಗೋಪಿ ವೃತ್ತದಿಂದ ಅಮೀರ್ ಅಹ್ಮದ್ ವೃತ್ತದವರೆಗೆ, ಹಳೇ ತೀರ್ಥಹಳ್ಳಿ ರಸ್ತೆ, ಎಂಕೆಕೆ ರಸ್ತೆ, ಕೆಆರ್ ಪುರಂ ರಸ್ತೆಗಳಲ್ಲಿ ವಾಹನದ ದಟ್ಟಣೆ ಅಧಿಕವಾಗಿರುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗಿತ್ತಿರುವ ಹಿನ್ನೆಲೆ ಈ ಕೆಳಕಂಡಂತೆ ವಾಹನ ನಿಲುಗಡೆ ಕುರಿತು ಹಾಗೂ ಪಾಲಿಕೆಯಿಂದ ನಿರ್ವಹಿಸುತ್ತಿರುವ ಬಹುಹಂತದ  ಪಾರ್ಕಿಂಗ್ ಕಟ್ಟಡದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಲು ಆದೇಶಿಸಿದೆ.

ದ್ವಿಚಕ್ರ ವಾಹನ ನಿಲುಗಡೆ :

ADVERTISEMENT


ಮಹಾನಗರಪಾಲಿಕೆ ಕಾಂಪ್ಲೆಕ್ಸ್ ಪ್ರಾರಂಭದಿಂದ(ಕುಚಲಕ್ಕಿ ಕೇರಿ ಎದುರಿನಿಂದ ಕೋಕಿಲಾ ರೇಡಿಯೋ ಅಂಗಡಿಯವರೆಗೆ ಎಡಬದಿಯಲ್ಲಿ ದ್ವಿಚಕ್ರ ಪಾರ್ಕಿಂಗ್. ಸಂಗಮ್ ಟೈಲರ್ ಶಾಪ್‌ನಿಂದ ಡಯಟ್ ಕಾಲೇಜ್ ಕ್ರಾಸ್(ಸಾವರ್ಕರ್ ನಗರ ಕ್ರಾಸ್)ವರೆಗೆ ಬಲ ಬದಿಯಲ್ಲಿ ದ್ವಿಚಕ್ರ ಪಾರ್ಕಿಂಗ್.

ನಾಲ್ಕು ಚಕ್ರದ ವಾಹನ ನಿಲುಗಡೆ ನಿಷೇಧ:


ಬಿ.ಹೆಚ್.ರಸ್ತೆ: ಅಮೀರ್ ಅಹ್ಮದ್ ಸರ್ಕಲ್ ವೆಂಕಟೇಶ್ವರ ಸ್ವೀಟ್ ಹೌಸ್‌ನಿಂದ ಕರ್ನಾಟಕ ಸಂಘ ಸರ್ಕಲ್‌ವರೆಗೆ ರಸ್ತೆಯ ಎಡಬಲ ಬದಿಯಲ್ಲಿ. ಗಾಂಧಿ ಬಜಾರ್ ಮುಖ್ಯ ರಸ್ತೆ, ಶಿವಪ್ಪನಾಯಕ ಸರ್ಕಲ್‌ನಿಂದ ಗಾಂಧಿಬಜಾರ್ 02ನೇ ಕ್ರಾಸ್‌ವರೆಗೆ ರಸ್ತೆಯ ಎರಡು ಬದಿಯಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ನಿಲುಗಡೆ ನಿಷೇಧ.

ನೆಹರು ರಸ್ತೆ:

ನೆಹರು ರಸ್ತೆಯಲ್ಲಿ ಗೋಪಿ ಸರ್ಕಲ್‌ನಿಂದ ಅಮೀರ್ ಅಹ್ಮದ್ ಸರ್ಕಲ್‌ವರೆಗೆ ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ವಾಹನಗಳ ಪಾರ್ಕಿಂಗ್ ಸಲುವಾಗಿ ಅಭಿವೃದ್ದಿಪಡಿಸಿರುವ ಕನ್ಸರ್ವೆನ್ಸಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಜಾರಿಯಾದ ನಂತರ ಈ ರಸ್ತೆಯಲ್ಲಿ ನಾಲ್ಕು ಚಕ್ರದ ವಾಹನಗಳ ಪಾರ್ಕಿಂಗ್ ನಿಷೇಧ ಮಾಡಲಾಗಿದ್ದು ಈ ಅಧಿಸೂಚನೆಯನ್ನು ನ.11 ರಂದು ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.