ಹೊಸನಗರ: ಕುಂಬಾರ ಸಮುದಾಯದ ಯುವಕ-ಯುವತಿಯರು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.
ತಾಲ್ಲೂಕಿನ ಹೇರಗಲ್ಲಿನಲ್ಲಿ ನಡೆದ ಕುಂಬಾರರ ಸಂಘದ 18ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಇಂದಿನ ಫೈಬರ್, ಪ್ಲಾಸ್ಟಿಕ್ ಯುಗದಲ್ಲಿ ಕುಂಬಾರಿಕೆ ಕೆಲಸಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದರೂ. ಅದನ್ನು ಮುಂದುವರಿಸುತ್ತಿರುವುದು ಶ್ಲಾಘನೀಯ ಎಂದರು.
ತಾಲ್ಲೂಕು ಸಂಘದ ಅಧ್ಯಕ್ಷ ಹಿಂಡ್ಲೆಮನೆ ಎಲ್. ಶೇಖರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಉಪಾಧ್ಯಕ್ಷೆ ಪೂರ್ಣಿಮಾ ಸೋಮಶೇಖರ್, ಸದಸ್ಯರಾದ ಜ್ಯೋತಿ ನಾಗರಾಜ್, ಜಿ.ನಾಗರಾಜ್, ಎನ್. ಸತೀಶ್, ಕೆ.ಅರವಿಂದ, ಗಣಪತಿ, ಕುಮಾರ, ಎಚ್.ವಿ.ಗಣೇಶ್ ಯೋಗೇಂದ್ರ ಎಂ.ಎನ್., ಮಂಜಪ್ಪ, ಸರಿತಾ ವಾಸುದೇವ, ದುಗ್ಗಪ್ಪ, ದೇವೇಂದ್ರ, ಪಾರ್ವತಮ್ಮ ರಮೇಶ, ಉಮೇಶ ಉಪಸ್ಥಿತರಿದ್ದರು.
ಸಮಾಜದ ಹಿರಿಯರಾದ ಹೇರಗಲ್ಲು ಹೊನ್ನಮ್ಮ, ದೊಡ್ಮನೆ ವೆಂಕಟೇಶ ಅವರನ್ನು ಸನ್ಮಾನಿಸಲಾಯಿತು. ರಾಜ್ಯಮಟ್ಟದ ಕ್ರೀಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾವಂತರಿಗೆ ಹಾಗೂ ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ನಗರ ಸಿಆರ್‌ಪಿ ಕೆ.ಆರ್.ರವಿ ಉಪನ್ಯಾಸ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.