ADVERTISEMENT

ಇಂದಿನಿಂದ ನವ ಕರ್ನಾಟಕ ಪ್ರಕಾಶನ ಪುಸ್ತಕಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 11:23 IST
Last Updated 16 ಜನವರಿ 2020, 11:23 IST

ಶಿವಮೊಗ್ಗ:ಕರ್ನಾಟಕ ಸಂಘದ ಸಭಾಂಗಣದಲ್ಲಿನವ ಕರ್ನಾಟಕ ಪ್ರಕಾಶನ ಜ.17ರಿಂದ26ರವರೆಗೆ ಪುಸ್ತಕ ಪ್ರದರ್ಶನ, ಲೇಖಕರ ಜತೆ ಸಂವಾದ, 8 ಕೃತಿಗಳ ಲೋಕಾರ್ಪಣೆ, ಪುಸ್ತಕಗಳ ಪರಿಚಯ ಕಾರ್ಯಕ್ರಮ ಹಮ್ಮಿಕೊಂಡಿದೆ.

ಪ್ರಕಾಶನದ 60ರ ಸಂಭ್ರಮಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.ಜ.17ರ ಸಂಜೆ 5.30ಕ್ಕೆ 8 ಕೃತಿಗಳ ಲೋಕಾರ್ಪಣೆ, 10 ದಿನಗಳ ಪುಸ್ತಕ ಪ್ರದರ್ಶನ ನಡೆಯಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸಿದ್ದನಗೌಡ ಪಾಟೀಲ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಡಾ.ಎಚ್.ಎಸ್.ಗೋಪಾಲರಾವ್, ರಾ.ನಂ.ಚಂದ್ರಶೇಖರ್ ಅವರ ಸಂಪಾದನೆಯ ‘ಸಮಗ್ರಕರ್ನಾಟಕದರ್ಶನ’, ಡಾ.ಎಚ್.ಆರ್.ಕೃಷ್ಣಮೂರ್ತಿ ಅವರ ‘ವಿಶ್ವದಲ್ಲಿ ನಾವು ಏಕಾಂಗಿಗಳೇ’, ಡಾ.ಮಹಬಲೇಶ್ ರಾವ್ ಅವರ ‘ಸ್ಪರ್ಧೆಯೋ, ಸಹಕಾರವೋ’, ಡಿ.ಜಿ.ಮಲ್ಲಿಕಾರ್ಜುನ್ ಅವರ ‘ಯೋರ್ದಾನ್ ಪಿರೆಮಸ್’, ಸವಿತಾ ಶ್ರೀನಿವಾಸ್ ಅವರ ’ತ್ರಿಲೋಕ ಸಂಚಾರಿ ನೀರೆ, ಡಾ.ಬಸವರಾಜ್ ಸಾದರ ಅವರ ಅನುವಾದಿತ ಕೃತಿ ‘ಚಿನಾರ್ ವೃಕ್ಷದ ಅಳು’, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ನಾಟಕ ರೂಪಾಂತರದ ಅ.ನಾ.ರಾವ್ ಜಾದವ್ ಅವರ ‘ಎಂಗ್ಟನ ಪುಂಗಿ’, ಡಾ.ಮಹಬಲೇಶ್ವರ ಅವರ ‘ಬುದ್ದಿಶಕ್ತಿ ಒಂದಲ್ಲ ಹಲವು’ ಪುಸ್ತಕಗಳು ಬಿಡುಗಡೆಯಾಗಲಿವೆ ಎಂದರು.

ADVERTISEMENT

26ರವರೆಗೆ ವಿವಿಧ ಲೇಖಕರು,ಪ್ರಕಾಶಕರಒಂದುಲಕ್ಷಕ್ಕೂ ಹೆಚ್ಚು ಪುಸ್ತಕ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಓದುಗರ ಅಭಿರುಚಿಗೆ ತಕ್ಕಂತೆ ಸುಲಭ ಬೆಲೆಯಲ್ಲಿ ಪುಸ್ತಕಗಳು ಲಭ್ಯವಿರುತ್ತವೆ. ಶೇ 15ರಿಂದ ಶೇ.50ರವರೆಗೆ ರಿಯಾಯಿತಿ ಇರುತ್ತದೆ ಎಂದು ಮಾಹಿತಿ ನೀಡಿದರು.

ಪ್ರತಿದಿನ ಸಂಜೆ 6ಕ್ಕೆ ವಿವಿಧ ಸಾಹಿತ್ಯ ಕಾರ್ಯಕ್ರಮಗಳು ಇರುತ್ತವೆ. 18 ಮತ್ತು 19ರಂದು ಲೇಖಕರೊಂದಿಗೆ ಸಂವಾದ, ಜ.20 ರಿಂದ 26ರವರೆಗೆ ನನ್ನ ಪ್ರೀತಿಯ ಪುಸ್ತಕ ಕಾರ್ಯಕ್ರಮದಲ್ಲಿವಿವಿಧ ಲೇಖಕರ, ವಿವಿಧ ಪ್ರಕಾಶಕರ ಇತ್ತೀಚಿನ 14 ಪುಸ್ತಕಗಳ ಪರಿಚಯ ಕಾರ್ಯಕ್ರಮ ನಡೆಯಲಿದೆ.18ರ ಸಂಜೆ ವಸುದೇಂದ್ರ ಅವರಿಂದ ತೇಜೋ ತುಂಗಭದ್ರ ಕುರಿತು ಓದುಗರೊಂದಿಗೆ ಮಾತುಕತೆಇರುತ್ತದೆ ಎಂದರು.

ಸಾಹಿತಿ ಡಾ.ರಾಜೇಂದ್ರ ಚೆನ್ನಿ ಕೃತಿಗಳ ಲೋಕಾರ್ಪಣೆಮಾಡುವರು. ಹರ್ಷಿತಾ, ಡಾ.ಬಸವರಾಜ್, ಡಾ.ಅನ್ನಪೂರ್ಣ ಅವರು ಕೃತಿಗಳ ಪರಿಚಯ ಮಾಡಿಕೊಡುವರು. ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿಡಾ.ಎಚ್.ಎಸ್.ನಾಗಭೂಷಣ್ಪುಸ್ತಕ ಪ್ರದರ್ಶನ ಉದ್ಘಾಟಿಸುವರು ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಜಿ.ವೆಂಕಟೇಶ್, ಜನಾರ್ಧನ್, ಎಚ್.ಎಸ್.ನಾಗಭೂಷಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.