ADVERTISEMENT

ಅಡಿಕೆ ಮಾನ ತೆಗೆದಿದ್ದೇ ಸಹಕಾರ ಭಾರತಿ: ರಮೇಶ್ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 13:25 IST
Last Updated 15 ಫೆಬ್ರುವರಿ 2020, 13:25 IST

ಶಿವಮೊಗ್ಗ: ಬಿಜೆಪಿಹಾಗೂ ಅದರ ಅಂಗ ಸಂಸ್ಥೆ ಸಹಕಾರ ಭಾರತಿ ಅಡಿಕೆಯ ಮಾನ ಹರಾಜು ಹಾಕಿವೆ ಎಂದುರಾಷ್ಟ್ರೀಯ ಸಹಕಾರ ಪ್ರತಿಷ್ಠಾನದ ಮುಖ್ಯಸ್ಥ ರಮೇಶ್ ಹೆಗ್ಡೆ ಆರೋಪಿಸಿದರು.

ಸಹಕಾರ ಭಾರತಿ ಬಿಜೆಪಿಯ ಅಂಗ ಸಂಸ್ಥೆ. ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಏನೂ ಮಾಡಿಲ್ಲ. ಈ ಸ್ವಯಂಘೋಷಿತ ನಾಯಕರು ಮ್ಯಾಮ್ಕೋಸ್ ಚುನಾವಣೆಗೆ ಸ್ಪರ್ಧಿಸಲು ಹೊರಟಿದ್ದಾರೆ. ಅಡಿಕೆ ಮಾನ ತೆಗೆದ ಅವರಿಗೆ ಚುನಾವಣೆಗೆ ನಿಲ್ಲುವ ನೈತಿಕತೆಇಲ್ಲ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.

2014ರ ಲೋಕಸಭಾ ಚುನಾವಣೆಪ್ರಚಾರಕ್ಕೆಮೋದಿಅವರು ಚಿಕ್ಕಮಗಳೂರಿಗೆ ಬಂದಿದ್ದರು. ಆಗ ಅವರು ಅಡಿಕೆ ಬೆಳೆಗೆ ಗೌರವ ತಂದುಕೊಡುತ್ತೇವೆ ಎಂದುಭರವಸೆ ನೀಡಿದ್ದರು.ಆದರೆ, ಅವರ ಸಂಪುಟದ ಸಚಿವರು ಅಡಿಕೆ ಆರೋಗ್ಯಕ್ಕೆ ಹಾನಿಕರ ಎಂದು ಹೇಳುವ ಮೂಲಕ ಅಡಿಕೆಯ ಮಾನ ಹರಾಜು ಹಾಕಿದ್ದಾರೆ. ಈ ವಿಷಯ ಕುರಿತು ಸಹಕಾರ ಭಾರತಿ ಚಕಾರ ಎತ್ತಲಿಲ್ಲಎಂದು ದೂರಿದರು.

ADVERTISEMENT

ಬಿಜೆಪಿಅಧಿಕಾರಕ್ಕೆ ಬಂದ ನಂತರ ಅಡಿಕೆ ಬೆಳೆಗಾರರ ಹಿತ ಕಡೆಗಣಿಸಿದೆ. ಸುಪ್ರೀಂಕೋರ್ಟ್‌ನಲ್ಲಿ ಗುಟ್ಕಾ ಕಂಪನಿಗಳು ಹಾಕಿರುವ ಮೊಕದ್ದಮೆಗೆ ಪ್ರಮಾಣಪತ್ರ ಸಲ್ಲಿಸಿಲ್ಲ. ವಿಶೇಷ ತಜ್ಞರ ಸಮಿತಿಯನ್ನೂ ರಚಿಸಿಲ್ಲ. ವಾಜಪೇಯಿಪ್ರಧಾನಮಂತ್ರಿಯಾದ ಸಮಯದಲ್ಲಿ ರಚಿಸಲಾಗಿದ್ದತಜ್ಞರ ಸಮಿತಿಯಲ್ಲಿ ಇದೇಸಹಕಾರ ಭಾರತಿ ಸದಸ್ಯರೇ ಇದ್ದರು.ಆ ಸಮಿತಿ ಅಡಿಕೆ ಹಾನಿಕರ ಎಂದು ವರದಿ ನೀಡಿತ್ತುಎಂದು ಆರೋಪಿಸಿದರು.

ವಿದೇಶಿ ಆಮದುತಡೆಯಲು ಕೇಂದ್ರ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ಕೇಂದ್ರದ ಚುಕ್ಕಾಣಿ ಹಿಡಿದಾಗ ಪ್ರತಿ ಕೆ.ಜಿ. ಅಡಿಕೆಗೆ 35 ರು. ಇದ್ದ ಆಮದು ಸುಂಕವನ್ನು 110 ರು.ಕ್ಕೆ ಏರಿಸಲಾಗಿತ್ತು. ಇದರಿಂದ ಕ್ವಿಂಟಲ್‌ ಅಡಿಕೆ ಧಾರಣೆ 1 ಲಕ್ಷ ರು.ಗಡಿ ಮುಟ್ಟಿತ್ತು.ಬಿಜೆಪಿ ಅಡಿಕೆ ಬೆಳೆಗಾರರ ಹಿತ ಕಾಯುವ ಕಪಟ ನಾಟಕ ಆಡುತ್ತಿದೆ.ರಾಜ್ಯದಲ್ಲಿ ಅಡಿಕೆ ಮಂಡಳಿ ರಚನೆಗೆ ಮುಂದಾಗಿದ್ದ ಕಾಂಗ್ರೆಸ್‌ಗೆ ಬೆಂಬಲ ನೀಡಲಿಲ್ಲ. ಆಡಿಕೆ ಮಂಡಳಿ ಮುಂದುವರಿಸಲಿಲ್ಲ. ಅದರ ಬದಲು ಕಾರ್ಯಪಡೆ ರಚಿಸಿರುವುದು ಹಾಸ್ಯಾಸ್ಪದ ಎಂದು ಕುಟುಕಿದರು.

ಸಹಕಾರ ಭಾರತಿ ವಿರುದ್ಧ ರಾಷ್ಟ್ರೀಯ ಸಹಕಾರ ಪ್ರತಿಷ್ಠಾನದ 19ಅಭ್ಯರ್ಥಿಗಳನ್ನು ಮ್ಯಾಮ್ಕೋಸ್ ಚುನಾವಣೆಗೆ ನಿಲ್ಲಿಸಲಾಗಿದೆ ಎಂದು ವಿವರ ನೀಡಿದರು.

ಪತ್ರಿಕಾಗೊಷ್ಠಿಯಲ್ಲಿಎಸ್.ಪಿ.ದಿನೇಶ್, ಎನ್‌.ಎಂ.ದಯಾನಂದ, ಬಿ.ಎಚ್.ಲಿಂಗರಾಜು, ಎಚ್‌.ಜಿ.ಮಲ್ಲಯ್ಯ, ಕೆ.ಆರ್.ಶ್ರೀನಿವಾಸ ಕುಂಚೂರು, ಕೆ.ಎಸ್.ವೆಂಕಟೇಶ್ ಖಾಂಡ್ಯ, ಪದ್ಮನಾಭ್ ಹಾರೊಗೊಳಿಗೆಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.