ADVERTISEMENT

ಚುನಾವಣೆ ಗೆಲ್ಲಲು ಪಿಎಸ್‌ಐ ನೇಮಕಾತಿ ಹಗರಣದ ದುಡ್ಡು: ಕಿಮ್ಮನೆ ರತ್ನಾಕರ

ತೀರ್ಥಹಳ್ಳಿಯಲ್ಲಿ ₹ 70 ಕೋಟಿ ಖರ್ಚು: ಆರಗ ವಿರುದ್ಧ ಕಿಮ್ಮನೆ ಆರೋಪ

​ಪ್ರಜಾವಾಣಿ ವಾರ್ತೆ
Published 28 ಜೂನ್ 2023, 13:37 IST
Last Updated 28 ಜೂನ್ 2023, 13:37 IST
ಕಿಮ್ಮನೆ ರತ್ನಾಕರ
ಕಿಮ್ಮನೆ ರತ್ನಾಕರ   

ಶಿವಮೊಗ್ಗ: ‘ಆರಗ ಜ್ಞಾನೇಂದ್ರ ಅವರು ಪಿಎಸ್‌ಐ ನೇಮಕಾತಿ ಹಗರಣದ ಆರೋಪಿಗಳಾದ ಸ್ಯಾಂಟ್ರೋ ರವಿ, ದಿವ್ಯಾ ಹಾಗರಗಿ ಹಾಗೂ ಆರ್.ಜಿ.ಪಾಟೀಲ ಅವರಿಂದ ಪಡೆದ ಹಣ ಖರ್ಚು ಮಾಡಿ ವಿಧಾನಸಭೆ ಚುನಾವಣೆಯಲ್ಲಿ ನನ್ನ ವಿರುದ್ಧ ಗೆದ್ದಿದ್ದಾರೆ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಆರೋಪಿಸಿದರು.

‘ಚುನಾವಣೆ ವೇಳೆ ಜ್ಞಾನೇಂದ್ರ ಅವರು ತೀರ್ಥಹಳ್ಳಿ ಕ್ಷೇತ್ರದಲ್ಲಿ ₹ 70 ಕೋಟಿ ಖರ್ಚು ಮಾಡಿದ್ದಾರೆ. ಅದು ಪಿಎಸ್‌ಐ ಹಗರಣದ ಹಣ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಬಿಜೆಪಿ ಅಧಿಕಾರಾವಧಿಯಲ್ಲಿ ನಡೆದ ಎಲ್ಲಾ ಹಗರಣಗಳ ತನಿಖೆ ಮಾಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದೇ ರೀತಿ ಪಿಎಸ್‌ಐ ನೇಮಕಾತಿ ಹಗರಣವನ್ನೂ ತನಿಖೆಗೊಳಪಡಿಸುವಂತೆ ಸರ್ಕಾರಕ್ಕೆ ನಾನೇ ಮನವಿ ಮಾಡಿರುವೆ. ಶೇ 40ರಷ್ಟು ಕಮಿಷನ್ ಪಡೆದ ಆರೋಪದಡಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ನಡೆಸಿರುವ ಎಲ್ಲ ಕಾಮಗಾರಿಗಳನ್ನು ತನಿಖೆಗೊಳಪಡಿಸಬೇಕು. ಅದು ಮುಗಿಯುವವರೆಗೂ ಬಿಲ್ ಪಾವತಿಸಬಾರದು ಎಂದು ಸರ್ಕಾರಕ್ಕೆ ಅರ್ಜಿ ಸಲ್ಲಿಸುತ್ತೇನೆ’ ಎಂದು ತಿಳಿಸಿದರು.

ADVERTISEMENT

‘ಒಕ್ಕೂಟ ವ್ಯವಸ್ಥೆಯ ದೇಶದಲ್ಲಿ ಎಲ್ಲಾ ರಾಜ್ಯಗಳನ್ನು ಸಮಾನವಾಗಿ ನೋಡಿಕೊಳ್ಳಬೇಕಾದುದು ಪ್ರಧಾನಿ ಅವರ ಜವಾಬ್ದಾರಿ. ಈಗ ರಾಜ್ಯಕ್ಕೆ ಅಕ್ಕಿ ಕೊಡುವುದಿಲ್ಲ ಎಂದು ಹೇಳುವುದು ಸರಿಯಲ್ಲ. ಇದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗಲಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.