ಭದ್ರಾವತಿ: ಸ್ವಂತ ಅಧ್ಯಯನ, ಅಸಾಧಾರಣ ಸಾಮರ್ಥ್ಯ, ಅಪಾರ ಆತ್ಮವಿಶ್ವಾಸ, ಪರಿಶ್ರಮದಿಂದ ಭಾರತಕ್ಕೆ ಕೇವಲ ಇನ್ನೂರು ರೂಪಾಯಿಯ ಉಪಕರಣದಲ್ಲಿ ವಿಶ್ವದ ಶ್ರೇಷ್ಠ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಅದ್ಭುತ ವಿಜ್ಞಾನಿ ಸಿ.ವಿ. ರಾಮನ್. ಅವರ ಬದುಕು ಸಾಧನೆ, ಸಂಶೋಧನೆ ವಿಜ್ಞಾನಿಗಳಿಗೆ, ವಿದ್ಯಾರ್ಥಿಗಳಿಗೆ ಆದರ್ಶಪ್ರಾಯವಾದದು ಎಂದು ಹರೋನಹಳ್ಳಿ ಸ್ವಾಮಿ ತಿಳಿಸಿದರು.
ಅವರು ತಾಲ್ಲೂಕಿನ ಹಿರಿಯೂರಿನ ಎಸ್.ಬಿ.ಎಂ.ಎಂ.ಆರ್. ಪ್ರೌಢಶಾಲೆಯಲ್ಲಿ ಬುಧವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಸರ್ ಸಿ.ವಿ. ರಾಮನ್ ಅವರ ಬದುಕು ಮತ್ತು ಸಾಧನೆಯನ್ನು ಕುರಿತು ಮಾತನಾಡಿದರು.
ರಾಮನ್ ಅವರು ತಮ್ಮ ತಂದೆಯ ಸಂಗೀತ ಮತ್ತು ಪುಸ್ತಕಗಳಿಂದ ಪ್ರಭಾವಿತರಾದವರು. ಕೇವಲ 20ನೇ ವರ್ಷಕ್ಕೆ ಎಫ್‌ಸಿಎಸ್ ಪರೀಕ್ಷೆ ಪಾಸು ಮಾಡಿ ಕೋಲ್ಕತ್ತಾದ ಹಣಕಾಸು ಇಲಾಖೆಯಲ್ಲಿ ಅಧಿಕಾರಿಯದರು. ರಾತ್ರಿ ಹಗಲು ವೃತ್ತಿಯ ಜೊತೆಗೆ ವಿಜ್ಞಾನದ ಸಂಶೋಧನೆಯಲ್ಲಿ ತೊಡಗಿಕೊಂಡರು. ಬೆಳಕಿನ ಚದುರುವಿಕೆಯ ಆವಿಷ್ಕಾರಕ್ಕೆ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಮಹಾನ್ ವಿಜ್ಞಾನಿ ಅವರು ಎಂದು ಶ್ಲಾಘಿಸಿದರು.
ಅಧ್ಯಕ್ಷತೆಯನ್ನು ವಿಜ್ಞಾನ ಶಿಕ್ಷಕಿ ಜಾನಿ ವಹಿಸಿದ್ದರು. ಭೂಮಿಕಾ, ಧನಲಕ್ಷ್ಮಿ, ಧನುಶ್ರೀ ಭಾಗಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.