ADVERTISEMENT

ಗುಣಮಟ್ಟದ ಮನೆ ನಿರ್ಮಿಸಲು ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 12:31 IST
Last Updated 28 ಜೂನ್ 2019, 12:31 IST
ಶಿವಮೊಗ್ಗದ ಶಾಂತಿನಗರ ನಿವಾಸಿಗಳು ಕಳಪೆ ದರ್ಜೆಯ ಮನೆಗಳ ನಿರ್ಮಾಣ ವಿರೋಧಿಸಿ ಶುಕ್ರವಾರ ಕೊಳಚೆ ನಿರ್ಮೂಲನಾ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು.
ಶಿವಮೊಗ್ಗದ ಶಾಂತಿನಗರ ನಿವಾಸಿಗಳು ಕಳಪೆ ದರ್ಜೆಯ ಮನೆಗಳ ನಿರ್ಮಾಣ ವಿರೋಧಿಸಿ ಶುಕ್ರವಾರ ಕೊಳಚೆ ನಿರ್ಮೂಲನಾ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಗುಣಮಟ್ಟದ ಮನೆಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿ ಮೂರನೇ ವಾರ್ಡ್‌ ವ್ಯಾಪ್ತಿಯ ಶಾಂತಿನಗರ ನಿವಾಸಿಗಳು ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ಶಾಂತಿನಗರದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ನಿರ್ಮಿಸುತ್ತಿರುವ ಮನೆಗಳು ಕಳಪೆ ಗೂನಮಟ್ಟದಿಂದ ಕೂಡಿವೆ. ಈಗಾಗಲೇ ನೂರಾರು ಮನೆಗಳು ನಿರ್ಮಾಣ ಕಾರ್ಯ ಮುಗಿದಿದೆ. ಮನೆ ಕಟ್ಟಲು ಮರಳನ್ನು ಬಳಸದೇ ಕಡಿಮೆ ದರ್ಜೆಯ ಜಲ್ಲಿಪುಡಿ ಬಳಸಲಾಗುತ್ತಿದೆ. ಕಬ್ಬಿಣ, ಸಿಮೆಂಟ್ ಸರಿಯಾದ ಪ್ರಮಾಣದಲ್ಲಿ ಹಾಕುತ್ತಿಲ್ಲ ಎಂದು ಆರೋಪಿಸಿದರು.

ಗುತ್ತಿಗೆದಾರರು ಹಾಗೂ ಕೊಳಚೆ ನಿರ್ಮೂಲನ ಮಂಡಳಿ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಾರೆ. ನಿಗದಿತ ಅವಧಿ ಒಳಗೆ ಪೂರ್ಣಗೊಳಿಸುತ್ತಿಲ್ಲ. ನಿಧಾನಗತಿ ಕಾಮಗಾರಿ ಪರಿಣಾಮ ಬಾಡಿಗೆ ಮನೆಯಲ್ಲಿ ಇರುವ ಬಡವರಿಗೆ ತೊಂದರೆಯಾಗಿದೆ ಎಂದು ದೂರಿದರು.

ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ, ಮುಖಂಡರಾದ ರುದ್ರಪ್ಪ, ಗೌರಮ್ಮ, ಸರೋಜಮ್ಮ, ಶಕುಂತಲಾ, ಪ್ರಕಾಶ್, ಮುನೀರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.