ADVERTISEMENT

ವಿದ್ಯಾರ್ಥಿ ವೇತನ ಸ್ಥಗಿತಕ್ಕೆ ಗೋಪಾಲಗೌಡ ಟ್ರಸ್ಟ್‌ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 11:58 IST
Last Updated 5 ಡಿಸೆಂಬರ್ 2019, 11:58 IST
ಕಲ್ಲೂರು ಮೇಘರಾಜ್
ಕಲ್ಲೂರು ಮೇಘರಾಜ್   

ಶಿವಮೊಗ್ಗ: ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನನಿಲ್ಲಿಸಿರುವ ರಾಜ್ಯಸರ್ಕಾರದಕ್ರಮವನ್ನುಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನಟ್ರಸ್ಟ್‌ಖಂಡಿಸಿದೆ.

ವಿದ್ಯಾರ್ಥಿವೇತನ ನಿಲ್ಲಿಸಿರುವುದು ಬಡ ಮಕ್ಕಳಿಗೆ ದ್ರೋಹ ಬಗೆದಂತೆ. ಸರ್ಕಾರದ ಇಂತಹ ನಿರ್ಧಾರ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಭವಿಷ್ಯಕ್ಕೆಕೊಡಲಿ ಪೆಟ್ಟು ನೀಡುತ್ತದೆ.ಬಡ ವಿದ್ಯಾರ್ಥಿಗಳುವಿದ್ಯಾರ್ಥಿವೇತನನಂಬಿಕೊಂಡೇ ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯನ್ನೇ ಬಿಡುವಸನ್ನಿವೇಶವೂ ಬರಬಹುದು ಎಂದುಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ವಸಂತ್ ಕುಮಾರ್ ನ.2ರಂದು ಸುತ್ತೋಲೆ ಹೊರಡಿಸಿದ್ದಾರೆ. 1ರಿಂದ 10ನೆ ತರಗತಿವರೆಗಿನ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಈಗಾಗಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.ಅಧಿಕಾರಿಗಳ ಈ ನಿರ್ಧಾರ ಮಕ್ಕಳ ಶೈಕ್ಷಣಿಕ ಭವಿಷ್ಯವೇ ಹಾಳಾಗುತ್ತದೆ ಎಂದು ಆಕ್ರೋಶ ವ್ಯಕ್ತಡಿಸಿದರು.

ADVERTISEMENT

ಹಿಂದುಳಿದ ವರ್ಗಗಳ ನೇತಾರ ದೇವರಾಜ್ ಅರಸುರವರ ಹೆಸರಿನಲ್ಲಿ ನೀಡಬೇಕಾಗಿದ್ದ ಪ್ರಶಸ್ತಿ ನಿಲ್ಲಿಸಿದ್ದಾರೆ.ಸರ್ಕಾರದಬಳಿ ಪ್ರಶಸ್ತಿಯ ಮೊತ್ತ ₹5 ಲಕ್ಷ ಇಲ್ಲವೇ? ಮುಖ್ಯಮಂತ್ರಿ ಮತ್ತು ಸಚಿವರು ತಕ್ಷಣವಿದ್ಯಾರ್ಥಿ ವೇತನದ ಸುತ್ತೋಲೆ ವಾಪಸ್ ಪಡೆಯಬೇಕು. ದೇವರಾಜ ಅರಸುಪ್ರಶಸ್ತಿ ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ ಪ್ರಮುಖರಾದ ಜಿ.ಮಾದಪ್ಪ, ಖಜಾಂಚಿ ಹೊಳೆ ಮಡಿಲು ವೆಂಕಟೇಶ್, ಉಪಾಧ್ಯಕ್ಷ ಎಸ್.ವಿ. ರಾಜಮ್ಮ, ಎಚ್.ಎಂ. ಸಂಗಯ್ಯ, ಶಂಕರ ನಾಯ್ಕ, ಪ್ರೊ.ಶೇಖರ್ ಗೌಳೇರ್‌ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.