ADVERTISEMENT

ಚಂದ್ರಗುತ್ತಿ ದೇವಾಲಯದ ಕಾಣಿಕೆ ವಸ್ತುಗಳ ಬಹಿರಂಗ ಹರಾಜು

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 7:49 IST
Last Updated 17 ಜುಲೈ 2025, 7:49 IST
ಸೊರಬ ತಾಲ್ಲೂಕಿನ ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನಕ್ಕೆ ಭಕ್ತರಿಂದ ಹರಕೆ ರೂಪದಲ್ಲಿ ಬಂದ ವಸ್ತುಗಳನ್ನು ಬಹಿರಂಗ ಹರಾಜು ಮಾಡಲಾಯಿತು
ಸೊರಬ ತಾಲ್ಲೂಕಿನ ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನಕ್ಕೆ ಭಕ್ತರಿಂದ ಹರಕೆ ರೂಪದಲ್ಲಿ ಬಂದ ವಸ್ತುಗಳನ್ನು ಬಹಿರಂಗ ಹರಾಜು ಮಾಡಲಾಯಿತು   

ಸೊರಬ: ತಾಲ್ಲೂಕಿನ ಚಂದ್ರಗುತ್ತಿಯ ಪುರಾಣ ಪ್ರಸಿದ್ಧ ರೇಣುಕಾಂಬ ದೇವಸ್ಥಾನಕ್ಕೆ ಭಕ್ತರಿಂದ ಹರಕೆ ರೂಪದಲ್ಲಿ ಬಂದ ವಸ್ತುಗಳನ್ನು ದೇವಸ್ಥಾನದ ಕಲ್ಯಾಣ ಮಂಟಪ ಆವರಣದಲ್ಲಿ ಬಹಿರಂಗ ಹರಾಜು ಮಾಡಲಾಯಿತು.

ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಪ್ರಮೀಳಾ ಕುಮಾರಿ ಅವರ ಸಮ್ಮುಖದಲ್ಲಿ ಬೆಲ್ಲ, ಸಕ್ಕರೆ, ಅಕ್ಕಿ, ತೆಂಗಿನ ಕಾಯಿ, ಒಣ ಕೊಬ್ಬರಿ, ಮೈದಾ ಹಿಟ್ಟು, ತೊಗರಿ ಬೆಳೆ, ಗೋಧಿ ಕಡಿ, ಕಡ್ಲೆ ಬೆಳೆ, ಭತ್ತ, ಶುಂಠಿ, ಅರಿಶಿಣ ಕೊಂಬು, ಅಡಿಕೆ, ದೀಪದ ಎಣ್ಣೆ, ಅಡುಗೆ ಎಣ್ಣೆಯನ್ನು ಬಹಿರಂಗವಾಗಿ ಹರಾಜು ಮಾಡಲಾಯಿತು.

ಹರಕೆ ವಸ್ತುಗಳ ಹರಾಜಿನಿಂದ ₹9,30,200 ಆದಾಯ ದೇವಾಲಯಕ್ಕೆ ಸಂದಾಯವಾಗಿದೆ. ಶಿರಸ್ತೇದಾರ್ ರಮೇಶ್, ಚಂದ್ರಗುತ್ತಿ ಗ್ರಾಮಸ್ಥರು, ತಾಲ್ಲೂಕು ಹಾಗೂ ಸುತ್ತಲಿನ ಗ್ರಾಮಸ್ಥರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು‌.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.