ತೀರ್ಥಹಳ್ಳಿಯ ಆರ್.ದೀಕ್ಷಾ
ಶಿವಮೊಗ್ಗ: ದ್ವಿತೀಯ ಪಿಯುಸಿ ಪರೀಕ್ಷೆ ಮಂಗಳವಾರ ಪ್ರಕಟವಾಗಿದ್ದು, ಶೇ 79.91ರಷ್ಟು ಫಲಿತಾಂಶದೊಂದಿಗೆ ಶಿವಮೊಗ್ಗ ಜಿಲ್ಲೆ ರಾಜ್ಯಮಟ್ಟದಲ್ಲಿ ಏಳನೇ ಸ್ಥಾನ ಪಡೆದಿದೆ. ತೀರ್ಥಹಳ್ಳಿಯ ಮೇಲಿನ ಕುರುವಳ್ಳಿಯ ವಾಗ್ದೇವಿ ಪದವಿ ಪೂರ್ವ ಕಾಲೇಜಿನ ಆರ್.ದೀಕ್ಷಾ 600 ಕ್ಕೆ 599 ಅಂಕಗಳ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ದೀಕ್ಷಾ ತೀರ್ಥಹಳ್ಳಿಯ ರಾಘವೇಂದ್ರ ಕಲ್ಲೂರು ಹಾಗೂ ಉಷಾ ದಂಪತಿಯ ಪುತ್ರಿ.
ಒಂದು ಸ್ಥಾನ ಬಡ್ತಿ: ಕಳೆದ ವರ್ಷ ಶೇ 88 ಫಲಿತಾಂಶದೊಂದಿಗೆ ರಾಜ್ಯಮಟ್ಟದಲ್ಲಿ ಎಂಟನೇ ಸ್ಥಾನ ಪಡೆದಿದ್ದ ಶಿವಮೊಗ್ಗಕ್ಕೆ ಈ ಬಾರಿ ಏಳನೇ ಸ್ಥಾನಕ್ಕೆ ಬಡ್ತಿ ದೊರೆತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.