ADVERTISEMENT

ಕೋಳಿ ಫಾರಂ ಬಳಿ ಹೆಬ್ಬಾವು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 4:28 IST
Last Updated 15 ಸೆಪ್ಟೆಂಬರ್ 2022, 4:28 IST
ಹೆಬ್ಬಾವನ್ನು ಸ್ನೇಕ್ ಕಿರಣ್ ರಕ್ಷಿಸಿದರು.
ಹೆಬ್ಬಾವನ್ನು ಸ್ನೇಕ್ ಕಿರಣ್ ರಕ್ಷಿಸಿದರು.   

ಶಿವಮೊಗ್ಗ: ಗಾಜನೂರು ಬಳಿ ಬುಧವಾರ ಕೋಳಿ ಫಾರಂಗೆ ಸಮೀಪ ಬಂದಿದ್ದ ಹೆಬ್ಬಾವನ್ನು ಶಿವಮೊಗ್ಗ ನಗರದ ಉರಗ ರಕ್ಷಕ ಸ್ನೇಕ್‌ ಕಿರಣ್ ಗುರುವಾರ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

ಗಾಜನೂರಿನ ತುಂಗಾ ಜಲಾಶಯ ಸಮೀಪದ ಮುಖ್ಯ ರಸ್ತೆಯಲ್ಲಿನ ಲಕ್ಷ್ಮೀ ಕೋಳಿ ಫಾರಂ ಪಕ್ಕದ ಅಡಿಕೆ ತೋಟಕ್ಕೆ ಬಂದಿದ್ದ ಸುಮಾರು ಏಳೂವರೆ ಅಡಿಯ ಅಡಿಯ ಹೆಬ್ಬಾವನ್ನು ಕಿರಣ್ ರಕ್ಷಿಸಿದ್ದಾರೆ. ಬೆಚ್ಚಗಿರುವ ಜಾಗ ಹುಡುಕಿಕೊಂಡು ಬಂದಿದ್ದ ಹೆಬ್ಬಾವು ತೋಟದ ಪೊದೆಗಳ ನಡುವೆ ಮಲಗಿತ್ತು. ಸ್ಥಳೀಯರಾದ ರಾಕೇಶ್ ನೀಡಿದ ಮಾಹಿತಿ ಅನ್ವಯ ಸ್ಥಳಕ್ಕೆ ಬಂದ ಕಿರಣ್ ಹಾವು ಹಿಡಿದು ಪಕ್ಕದ ಕಾಡಿಗೆ ಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT