ADVERTISEMENT

ಹೊಸನಗರ | ಚಕ್ರಾ ಜಲಾಶಯ ಭರ್ತಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 16:07 IST
Last Updated 28 ಜುಲೈ 2024, 16:07 IST
ಹೊಸನಗರ ತಾಲ್ಲೂಕಿನ ಚಕ್ರಾ ಜಲಾಶಯ ತುಂಬಿದ್ದು ಹೊರ ಹರಿವು ಹೆಚ್ಚಾಗಿರುವುದು
ಹೊಸನಗರ ತಾಲ್ಲೂಕಿನ ಚಕ್ರಾ ಜಲಾಶಯ ತುಂಬಿದ್ದು ಹೊರ ಹರಿವು ಹೆಚ್ಚಾಗಿರುವುದು   

ಹೊಸನಗರ: ತಾಲ್ಲೂಕಿನ ನಗರ ಹೋಬಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಇಲ್ಲಿನ ಚಕ್ರಾ ಜಲಾಶಯ ಭರ್ತಿಯಾಗಿದೆ. ಜಲಾಶಯ ಮೈದುಂಬಿದ್ದು ಭಾನುವಾರ ಬೆಳಿಗ್ಗೆಯಿಂದ ಹೊರ ಹರಿವು ಹೆಚ್ಚಾಗಿದೆ

ಜಲಾಶಯದ ಗರಿಷ್ಟ ಮಟ್ಟ 579 ಮೀಟರ್. ಜಲಾಶಯ ತುಂಬಿದ ಪರಿಣಾಮ ಕಾಲುವೆ ಮೂಲಕ ನೀರು ಲಿಂಗನಮಕ್ಕಿ ಜಲಾಶಯಕ್ಕೆ ಹರಿಯುತ್ತಿದೆ.

ಮಾರು 300 ಅಡಿ ಕೆಳಗೆ ನೀರು ಧುಮುಕುತ್ತಿದ್ದು, ನೋಡುಗರನ್ನು ಸೆಳೆಯುತ್ತಿದೆ. ಸುತ್ತಲೂ ಕಂಡುಬರುವ ಜಲರಾಶಿ ನಡುವೆ ಚಕ್ರಾ ಜಲಾಶಯದ ನೋಟ ಚಿತ್ತಾಕರ್ಷಕವಾಗಿದೆ.

ADVERTISEMENT

ಜಲಾಶಯ ತುಂಬಿದ ಮಾಹಿತಿ ತಿಳಿಯುತ್ತಿದ್ದಂತೆ ಹೆಚ್ಚಿನ ಪ್ರವಾಸಿಗರು ಜಲಾಶಯದತ್ತ ಬರುತ್ತಿದ್ದಾರೆ.

ಮಾಸ್ತಿಕಟ್ಟೆಯಲ್ಲಿ ಪಾಸ್:

ಚಕ್ರಾ ಮತ್ತು ಸಾವೆಹಕ್ಲು ಜಲಾಶಯಕ್ಕೆ ಹೋಗಲು ಪಾಸ್ ಇದ್ದು, ಮಾಸ್ತಿಕಟ್ಟೆಯ ಕೆಪಿಸಿ ಕಚೇರಿಯಲ್ಲಿ ಪಾಸ್ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.