
ಪ್ರಜಾವಾಣಿ ವಾರ್ತೆ
ಶಿವಮೊಗ್ಗ: ಜಿಲ್ಲೆಯ ಮಲೆನಾಡು ಪ್ರದೇಶದ ಕೆಲವೆಡೆ ಬುಧವಾರ ಮಳೆ ಸುರಿದಿದೆ. ಬೇಸಿಗೆ ಆರಂಭದಲ್ಲಿಯೇ ಮಳೆಯ ಸಿಂಚನವಾಗಿದ್ದು, ತಮಪಾದ ವಾತಾವರಣ ಸೃಷ್ಟಿಸಿದೆ.
ಶಿವಮೊಗ್ಗ ನಗರದಲ್ಲೂ ಇಡೀ ದಿನ ಮೋಡ ಮುಸುಕಿದ ವಾತಾವರಣ ಇತ್ತು. ಹೊಸನಗರ, ರಿಪ್ಪನ್‌ಪೇಟೆ, ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಹಾಗೂ ಸಾಗರ ನಗರದಲ್ಲಿ ಮಳೆಯಾಗಿದೆ. ರಿಪ್ಪನ್‌ಪೇಟೆ ಸುತ್ತಮುತ್ತ ಜೋರು ಮಳೆ ಆಗಿದ್ದು, ಹೊಸನಗರ ತಾಲ್ಲೂಕಿನ ಹಲವೆಡೆಯೂ ವರುಣನ ಆಗಮನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.