ADVERTISEMENT

ಶಿವಮೊಗ್ಗ | ಜಲಾಶಯಗಳಿಗೆ ಹೆಚ್ಚಿದ ಒಳಹರಿವು

​ಪ್ರಜಾವಾಣಿ ವಾರ್ತೆ
Published 20 ಜುಲೈ 2023, 7:12 IST
Last Updated 20 ಜುಲೈ 2023, 7:12 IST
ಹೊಸನಗರ ತಾಲ್ಲೂಕಿನ ಕಾರ್ಗಾಡಿ ಬಳಿ ಮೈದುಂಬಿ ಹರಿಯುತ್ತಿರುವ ಶರಾವತಿ ನದಿ
ಹೊಸನಗರ ತಾಲ್ಲೂಕಿನ ಕಾರ್ಗಾಡಿ ಬಳಿ ಮೈದುಂಬಿ ಹರಿಯುತ್ತಿರುವ ಶರಾವತಿ ನದಿ   

ಶಿವಮೊಗ್ಗ: ಜಿಲ್ಲೆಯ ಜಲಾಶಯಗಳಲ್ಲಿ ನೀರಿನ ಮಟ್ಟ ಕೊಂಚ ಏರಿಕೆಯಾಗಿದೆ. ಲಿಂಗನಮಕ್ಕಿಯಲ್ಲಿ 12,229 ಕ್ಯೂಸೆಕ್ ಇದ್ದು, ಲಕ್ಕವಳ್ಳಿಯ ಭದ್ರಾ ಜಲಾಶಯದಲ್ಲಿ 835, ಗಾಜನೂರಿನ ತುಂಗಾ ಜಲಾಶಯದಲ್ಲಿ 8,906 ಕ್ಯೂಸೆಕ್‌  ಒಳಹರಿವು, ಪಿಕ್‍ಅಪ್‌ನಲ್ಲಿ 553 ಕ್ಯುಸೆಕ್‌, ಚಕ್ರ 931,  ಸಾವೆಹಕ್ಲು, 801 ಕ್ಯುಸೆಕ್‌ ಒಳಹರಿವು ಇದೆ.

ಡ್ಯಾಂಗೆ ನೀರು

ನಗರ ಹೋಬಳಿ ಪ್ರದೇಶದಲ್ಲಿ ಉತ್ತಮ ಮಳೆ ಆಗಿದ್ದರಿಂದ ಜಲಾಶಯಗಳಿಗೆ ಒಳಹರಿವು ಹೆಚ್ಚು ಬಂದಿದೆ. ಮಾಣಿ ಸಾವೇಹಕ್ಕಲು ಚಕ್ರಾ ಜಲಾಶಯಗಳ ನೀರು ಸಂಗ್ರಹ ಮಟ್ಟ ಏರುತ್ತಿದೆ. ಮಾಣಿ ಜಲಾಶಯದಲ್ಲಿ 574.88 ಮೀ ನೀರು ಸಂಗ್ರಹ ಆಗಿದೆ. ಸಾವೇಹಕ್ಕಲು 576.86 ಮೀಟರ್ ಸಂಗ್ರಹ ಆಗಿದೆ. ಚಕ್ರಾ ಜಲಾಶಯದಲ್ಲಿ 569.60 ಮೀಟರ್ ನೀರು ಸಂಗ್ರಹ ಆಗಿದೆ. ಮಾಣಿಯಲ್ಲಿ 4144 ಕ್ಯೂಸಕ್ ಒಳಹರಿವು ಇದೆ.

ADVERTISEMENT

ಮುರಿದುಬಿದ್ದ ಕಂಬ

ತಾಲ್ಲೂಕಿನಲ್ಲಿ ಮಳೆ ಹಾನಿ ಆಗಿ 150ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. 5 ವಿದ್ಯುತ್ ಪರಿವರ್ತಕಗಳು ಹಾನಿ ಆಗಿದೆ ಎಂದು ಮೆಸ್ಕಾಂ ಎಇಇ ಚಂದ್ರಶೇಖರ್ ತಿಳಿಸಿದರು. ವಿದ್ಯುತ್ ಸಂಪರ್ಕ ಕಡಿತ: ಹುಲಿಕಲ್ ಘಾಟ್ ಬಳಿ ಸಾಗರ ತಾಲ್ಲೂಕು ಕರೂರು ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಸಾಧಿಸುವ 33 ಕೆ.ವಿ ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದು ಸಂಪರ್ಕ ಕಡಿತವಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.