ADVERTISEMENT

ಶಿವಮೊಗ್ಗ | ರಾಜ ಬೀದಿ ಉತ್ಸವ: ಶಾಸಕ ಎಸ್.ಎನ್.ಚನ್ನಬಸಪ್ಪ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2023, 7:47 IST
Last Updated 28 ಸೆಪ್ಟೆಂಬರ್ 2023, 7:47 IST
   

ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿಯ ವಿಸರ್ಜನೆ ಪೂರ್ವ ರಾಜ ಬೀದಿ ಉತ್ಸವಕ್ಕೆ ಶಾಸಕ ಎಸ್.ಎನ್. ಚನ್ನ ಬಸಪ್ಪ ಗುರುವಾರ ಅದ್ದೂರಿ ಚಾಲನೆ ನೀಡಿದರು.

ಭೀಮೇಶ್ವರ ದೇವಸ್ಥಾನದ ಎದುರು ಬೆಳಿಗ್ಗೆ 10.45ಕ್ಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಭವ್ಯ ಮೆರವಣಿಗೆ ಕೋಟೆ ರಸ್ತೆ ತಲುಪುತ್ತಿದ್ದಂತೆಯೇ ಗಣೇಶನಿಗೆ ಕೊಬ್ಬರಿ, ಸೇಬು ಮತ್ತು ಚೆಂಡು ಹೂವಿನ ಹಾರ ಹಾಕಲಾಯಿತು.

ADVERTISEMENT

ದಾರಿಯುದ್ದಕ್ಕೂ ವಿವಿಧ ಸಂಘಟನೆಗಳು ಮತ್ತು ಸಂಸ್ಥೆಗಳಿಂದ ಸಾರ್ವಜನಿಕರಿಗೆ ಲಘು ಉಪಾಹಾರ, ತಂಪು ಪಾನಿಯ, ಕುಡಿಯುವ ನೀರು, ಹಾಗೂ ಮಜ್ಜಿಗೆ ವಿತರಿಸಲಾಗಿತ್ತಿದೆ.

ಯುವಕ ಯುವತಿಯರು, ಹಿರಿಯ ನಾಗರೀಕರೂ ಸೇರಿದಂತೆ ಮಕ್ಕಳು ಮೆರವಣಿಗೆಯಲ್ಲಿ ಕೇಸರಿ ಶಾಲು, ತಲೆಗೆ ಪೇಟೆ, ಹಣೆಗೆ ಕುಂಕುಮ ತಿಲಕ ಇಟ್ಟು ನಡೆದಿದ್ದು, ಗಣಪನಿಗೆ ಜೈಕಾರ ಕೂಗಿದರು.

ಬಿಸಿಲಿಲನ್ನೂ ಲೆಕ್ಕಿಸದೆ ಜನಸ್ತೋಮ ಅಮೀರ್ ಅಹಮ್ಮದ್ ವೃತ್ತ ಹಾಗೂ ಶಿವಪ್ಪ ನಾಯಕ ವೃತ್ತದಲ್ಲಿ ಕಿಕ್ಕಿರುದು ನೆರೆದಿದೆ.

ದಾರಿಯುದ್ದಕ್ಕೂ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ. ಸಂಚಾರ ವ್ಯವಸ್ಥೆ ಸುಗಮಗೊಳಿ ಸುವುದಕ್ಕಾಗಿ ಗುರುವಾರ ಕೆಲವು ಮಾರ್ಗಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಜೊತೆಗೆ, ನಿಲುಗಡೆ ಮತ್ತು ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡಲಾಗಿದೆ. ಮೆರವಣಿಗೆ ಸಾಗುವ ಮಾರ್ಗ ಮತ್ತು ಮಾರ್ಗದ ಸುತ್ತಮುತ್ತ 100 ಮೀಟರ್ ಅಂತರದಲ್ಲಿ ವಾಹನಗಳ ಸಂಚಾರ ಹಾಗೂ ನಿಲುಗಡೆ ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.