ADVERTISEMENT

ಬೆಂಗಳೂರಿನ ‘ರೇವಾ ವಿವಿ’ಗೆ ಅತ್ಯುತ್ತಮ ಪ್ರದರ್ಶನ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 6:15 IST
Last Updated 3 ಆಗಸ್ಟ್ 2025, 6:15 IST
.
.   

ಶಿವಮೊಗ್ಗ: ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಎರಡು ದಿನಗಳ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ವತಿಯಿಂದ ಏರ್ಪಡಿಸಿದ್ದ 48 ನೇ ರಾಜ್ಯ ಮಟ್ಟದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪೋಸ್ಟರ್ ಪ್ರಸ್ತುತಿ ಮತ್ತು ನಾವೀನ್ಯ ಯೋಜನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನ ಸಂಪನ್ನಗೊಂಡಿದ್ದು, ಬೆಂಗಳೂರಿನ ರೇವಾ ವಿಶ್ವವಿದ್ಯಾಲಯ ಅತ್ಯುತ್ತಮ ಪ್ರದರ್ಶನ ಪ್ರಶಸ್ತಿಗೆ ಭಾಜನವಾಯಿತು‌.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ನೀಡಿದ ಪ್ರಾತ್ಯಕ್ಷಿಕೆ ಪ್ರದರ್ಶನವನ್ನು ಪರಾಮರ್ಶಿಸಿದ ವಿಜ್ಞಾನಿಗಳ ತಂಡ ಎಂಬಿಎ, ಎಂಸಿಎ, ಎಐ, ಏರೊನಾಟಿಕಲ್, ಸಾಮಾನ್ಯ ವಿಜ್ಞಾನಕ್ಕೆ ಸೇರಿದ ಸುಮಾರು 50 ಪ್ರಾತ್ಯಕ್ಷಿಕೆಗಳಿಗೆ ವರ್ಷದ 'ಅತ್ಯುತ್ತಮ ಯೋಜನೆ' ಬಹುಮಾನ ನೀಡಿ ಗೌರವಿಸಲಾಯಿತು.

ಸಮಾರೋಪ ಮಾತುಗಳನ್ನಾಡಿದ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಈ.ಸುಧೀಂದ್ರ, ಬೈಯೋ ಡಿಸೆಲ್ ಗೆ ಕುರಿತಾಗಿ ಅನೇಕ ಸಂಶೋಧನೆಗಳ ಅವಶ್ಯಕತೆಯಿದ್ದು, ಕೆ.ಎಸ್.ಸಿ.ಎಸ್.ಟಿ ಪೂರಕ ವೇದಿಕೆಗಳನ್ನು ಕಲ್ಪಿಸುತ್ತಿದೆ‌. ವಿದ್ಯಾರ್ಥಿಗಳು ಭಾರತದ ಮುಂದಿನ ಮುಂದಿನ ಭವಿಷ್ಯ, ಅಂತಹ ಭವಿಷ್ಯಕ್ಕೆ ನಾವೀನ್ಯತೆಯ ಮೂಲಕ ಶಕ್ತಿ ತುಂಬಲು ಶ್ರಮಿಸಿ ಎಂದು ಹೇಳಿದರು‌.

ADVERTISEMENT

ಜೆ.ಎನ್.ಎನ್.ಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಲ್ಲಿ ನಾವೀನ್ಯತೆ ಎಂಬುದು ಪ್ರಮುಖ ಪಾತ್ರ ವಹಿಸುತ್ತದೆ‌. ಸಾವಿರಾರು ವ್ಯಕ್ತಿತ್ವಗಳಲ್ಲಿ ನಾವು ವಿಭಿನ್ನವಾಗಿ ಕಾಣುವುದೇ ನಮ್ಮ ಆವಿಷ್ಕಾರಿ ಆಲೋಚನೆಗಳಿಂದ. ಉದ್ಯೋಗ ನೀಡುವ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳು ರೂಪಿಸಿದ ಆವಿಷ್ಕಾರಿ ಯೋಜನೆಗಳನ್ನು ಸ್ವಾಗತಿಸುತ್ತಾರೆ ವಿನಃ ರೆಸ್ಯೂಮ್ ಗಳನಲ್ಲ ಎಂಬ ವಾಸ್ತವತೆಯನ್ನು ಅರಿಯಿರಿ ಎಂದು ಹೇಳಿದರು.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಕಾರ್ಯದರ್ಶಿ ಪ್ರೊ.ಅಶೋಕ.ಎಂ.ರಾಯಚೂರು ಮಾತನಾಡಿ, ವಿದ್ಯಾರ್ಥಿಗಳು ರೂಪಿಸಿದ ಪ್ರಾತ್ಯಕ್ಷಿಕೆಗಳು ಮತ್ತಷ್ಟು ಆವಿಷ್ಕಾರಿ ಸ್ವರೂಪಗಳನ್ನು ಪಡೆಯಲಿ. ಅಂತರಶಿಸ್ತೀಯ ತಾಂತ್ರಿಕ ವಿಚಾರಗಳನ್ನು ಹೊಂದಿದ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆಯಿದೆ ಎಂದು ವಿವರಿಸಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.