ADVERTISEMENT

ರಿಪ್ಪನ್‌ಪೇಟೆ: ಜಿಂಕೆ ಚರ್ಮ ಮಾರಾಟಕ್ಕೆ ಯತ್ನ; ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 7:08 IST
Last Updated 14 ಡಿಸೆಂಬರ್ 2025, 7:08 IST
ಜಿಂಕೆ ಚರ್ಮ ಮಾರಾಟಕ್ಕೆ ಯತ್ನಿಸಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸ್‌ ಅರಣ್ಯ ದಳದ ಸಿಬ್ಬಂದಿ 
ಜಿಂಕೆ ಚರ್ಮ ಮಾರಾಟಕ್ಕೆ ಯತ್ನಿಸಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸ್‌ ಅರಣ್ಯ ದಳದ ಸಿಬ್ಬಂದಿ    

ರಿಪ್ಪನ್‌ಪೇಟೆ: ಇಲ್ಲಿಗೆ ಸಮೀಪದ ಯಡೇಹಳ್ಳಿ ಕ್ರಾಸ್ ಬಳಿ ಜಿಂಕೆ ಚರ್ಮ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್‌ಐ ವಿನಾಯಕ ಕೆ. ಮತ್ತು ಸಿಬ್ಬಂದಿ ಶನಿವಾರ ಬಂಧಿಸಿದ್ದಾರೆ.

ನವಲಗುಂದ ಗ್ರಾಮದ ಅರ್ಜುನ (26) ಬಂಧಿತ. 

ಅರಣ್ಯ ಸಂಚಾರಿ ದಳದ ಸಿಬ್ಬಂದಿ ಆರ್.ವಿಶ್ವನಾಥ, ಮಹೇಶ, ಚಂದ್ರಕಾಂತ್, ಆಂಜನೇಯ ಪಾಟೀಲ್, ಪ್ರಮೋದ ಕುಮಾರಿ ಮತ್ತು ಹಾಲೇಶ್‌ ಅವರೂ ಕಾರ್ಯಾಚರೆಣೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.