ADVERTISEMENT

ರಿಪ್ಪನ್‌ಪೇಟೆ: ರಾಮತೀರ್ಥ ಶರ್ಮಿನಾವತಿ ನದಿಯಲ್ಲಿ ಮಿಂದ ಭಕ್ತರು

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 14:22 IST
Last Updated 12 ಜನವರಿ 2024, 14:22 IST
ರಾಮತೀರ್ಥದಲ್ಲಿ ನೆಲೆನಿಂತ ರಾಮೇಶ್ವರ
ರಾಮತೀರ್ಥದಲ್ಲಿ ನೆಲೆನಿಂತ ರಾಮೇಶ್ವರ   

ರಿಪ್ಪನ್‌ಪೇಟೆ: ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂಡ್ಲೆಮನೆಯ ರಾಮತೀರ್ಥದ ರಾಮೇಶ್ವರ ದೇವಸ್ಥಾನದಲ್ಲಿ ಗುರುವಾರ 11ನೇ ವರ್ಷದ ವಾರ್ಷಿಕೋತ್ಸವ ಹಾಗೂ 42ನೇ ವರ್ಷದ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಜಿಲ್ಲೆ ಹೊರ ಜಿಲ್ಲೆಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ಶರ್ಮಿನಾವತಿ ನದಿಯಲ್ಲಿ ತೀರ್ಥಸ್ನಾನ ಮಾಡಿದರು. ನದಿ ತಟದಲ್ಲಿ ನೆಲೆಸಿರುವ ರಾಮೇಶ್ವರನ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಕೆಂಜಿಗಾಪುರದ ಶ್ರೀಧರ ಭಟ್ ಅವರ ಸಾಂಗತ್ಯದಲ್ಲಿ ಗಣಪತಿ ಪೂಜೆ, ಪುಣ್ಯಾಹ ಮತ್ತು ಕಲಾತತ್ವ ಹೋಮ ಹಾಗೂ ಹಾಲಂದೂರು ಶ್ರೀಧರ್ ಭಟ್, ದೇವಸ್ಥಾನದ ನಿತ್ಯ ಪೂಜೆ ಅರ್ಚಕರಾದ ಎ.ವಿ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ವ್ರತ, ತೀರ್ಥ, ಪ್ರಸಾದ ವಿನಿಯೋಗ ನೆರವೇರಿತು. ನಂತರ ಸಾಮೂಹಿಕ ಅನ್ನಸಂತರ್ಪಣೆ, ಸಂಜೆ ಹೊಳೆ ದೀಪೋತ್ಸವ ವಿಶೇಷ ಪೂಜೆಗಳು ನೆರವೇರಿದವು.

ADVERTISEMENT

ದೇವಸ್ಥಾನದ ಪದಾಧಿಕಾರಿಗಳಾದ ಎಚ್.ಜಿ ಶೇಖರಪ್ಪ, ಗಂಗಾಧರ, ಕರುಣಾಕರ, ಗಿರೀಶ್, ಶಶಿಕುಮಾರ್, ಚಂದ್ರಶೇಖ‌ರ್, ಶೇಖರಪ್ಪ, ಚಂದ್ರಕಲಾ, ಆನಂದ, ಕೇಶವಾಚಾರ್ಯ, ಅಚ್ಚುತಾಚಾರ್ಯ, ಉಮೇಶ್, ಜಯಂತ್ ಕೆ.ವೈ, ಸಂತೋಷ್, ನಾಗೇಶ್, ಗೀತಾ, ಲಲಿತಮ್ಮ ಮತ್ತಿತರರು ಇದ್ದರು.

ರಾಮತೀರ್ಥ ಶರ್ಮಿನಾವತಿ ನದಿಯಲ್ಲಿ ಮಿಂದ ಭಕ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.