ರಿಪ್ಪನ್‌ಪೇಟೆ: ಬೆಳ್ಳೂರು ಹಾಗೂ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ವಾರ ಬಿದ್ದ ಭಾರಿ ಮಳೆಗೆ ರಸ್ತೆ, ವಿದ್ಯುತ್ ಕಂಬ, ಸೇತುವೆ ಹಾಗೂ ಜಮೀನುಗಳು ಸೇರಿದಂತೆ ₹ 1 ಕೋಟಿ ಮೌಲ್ಯದ ಆಸ್ತಿ–ಪಾಸ್ತಿ ಹಾನಿಯಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಶನಿವಾರ ಮಾಹಿತಿ ನೀಡಿದರು.
ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಂಡಗದ್ದೆ, ಬರುವೆ, ಗುಳುಗುಳಿ ಶಂಕರ, ಹೊಸಳ್ಳಿ ರಸ್ತೆ, ಅಡ್ದೇರಿ ಸೇತುವೆ ಹಾಗೂ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಲಿ ಜೆಡ್ಡು ಸೇತುವೆ, ಸೂಡೂರು ನಾಗಭೂಷಣ ಭಟ್ಟರ ಮನೆ ರಸ್ತೆ ಸೇರಿ ವಿದ್ಯುತ್ ಕಂಬಗಳು ಹಾಗೂ ಕೆರೆ ಕೋಡಿ ಬಿದ್ದು ಹೊಲ ಗದ್ದೆಗಳು ಕೊಚ್ಚಿ ಹೋಗಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ ಎಂದು ತಿಳಿಸಿದರು.
ತಹಶೀಲ್ದಾರ್‌ಗೆ ರೈತರ ಆಸ್ತಿಪಾಸ್ತಿ ನಷ್ಟದ ಕುರಿತು ಮಾಹಿತಿ ತರಿಸಿಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿ, ನೆರೆ ಪರಿಹಾರ ತ್ವರಿತ ಗತಿಯಲ್ಲಿ ನೀಡುವಂತೆ ಸೂಚಿಸಿದರು.
ಸ್ಥಳೀಯ ಪ್ರತಿನಿಧಿಗಳು, ಅಧಿಕಾರಿಗಳು, ಪಕ್ಷದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.