
ಸಾಗರ: ಇಲ್ಲಿನ ಅಂಚೆ ಇಲಾಖೆ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗುರುವಾರ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಎನ್ ಪಿಎಸ್ ಮತ್ತು ಯುಪಿಎಸ್ ಪಿಂಚಣಿ ಯೋಜನೆಗಳನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕು, ಆರ್ ಎಂಎಸ್ ಮತ್ತು ಎಂಎಂಎಸ್ ಕಚೇರಿ ಉದ್ಯೋಗಿಗಳನ್ನು ವಿಲೀನಗೊಳಿಸುವುದನ್ನು ನಿಲ್ಲಿಸಬೇಕು, 2023 ನೇ ಸಾಲಿನ ಏಪ್ರಿಲ್ 26 ರ ಆದೇಶವನ್ನು ರದ್ದುಗೊಳಿಸಿ ಪಿ3 ಮತ್ತು ಎನ್ಎಫ್ ಪಿಇಗೆ ಮಾನ್ಯತೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಅಂಚೆ ಕಚೇರಿ ಕಾಯ್ದೆ 2023 ನ್ನು ರದ್ದುಗೊಳಿಸಬೇಕು, ಜಿಡಿಎಸ್ ನ ಕ್ಯಾಶುವಲ್ ಕಾರ್ಮಿಕರು ಮತ್ತು ಅರೆಕಾಲಿಕ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಎಲ್ಲಾ ಉದ್ಯೋಗಿಗಳಿಗೆ ಅವರ ಸಂಪೂರ್ಣ ಸೇವೆಯಲ್ಲಿ ಐದು ಭಡ್ತಿಗಳನ್ನು ನೀಡಬೇಕು, ಪರಿಹಾರದ ಮೇಲಿನ ಶೇ.5 ಭಡ್ತಿ ಮಿತಿಯನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೋವಿಡ್ ಸಂದರ್ಭದಲ್ಲಿ ಮುಚ್ಚಿರುವ ಅಂಚೆ ಕಚೇರಿಗಳನ್ನು ಮತ್ತೆ ತೆರೆಯಬೇಕು, 8 ನೇ ವೇತನ ಆಯೋಗದ ಶಿಫಾರಸ್ಸುಗಳನ್ನು 01-01-2026ಕ್ಕೆ ಅನ್ವಯವಾಗುವಂತೆ ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರಮುಖರಾದ ಪುಂಡಲೀಕ ಚೌಧರಿ, ಸುಪ್ರಿತಾ, ಅವಿನಾಶ್, ಮೋಹಿನಿ, ಸುಬ್ಬು, ನಂದನ್, ಸೂರಜ್ ಬಾಂಬುರೆ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.