
ಪ್ರಜಾವಾಣಿ ವಾರ್ತೆ(ಸಾಂದರ್ಭಿಕ ಚಿತ್ರ)
ಗೆಟ್ಟಿ ಚಿತ್ರ
ಭದ್ರಾವತಿ: ಜೇಡಿಕಟ್ಟೆ ಬಳಿ ಭಾನುವಾರ ಅಡಿಕೆ ಮರದ ತುಂಡನ್ನು ಎತ್ತಿನಗಾಡಿಯಲ್ಲಿ ಹೇರಿಕೊಂಡು ಭದ್ರಾವತಿ ಕಡೆಗೆ ತೆರಳುತ್ತಿದ್ದ ಕೂಲಿಕಾರ್ಮಿಕ ಗಾಡಿಯಿಂದ ಬಿದ್ದು ಸಾವಿಗೀಡಾಗಿದ್ದಾರೆ.
ಜೇಡಿಕಟ್ಟೆ ಹೊಸೂರಿನ ಶರವಣ (52) ಮೃತ ಕಾರ್ಮಿಕ. ಎತ್ತಿನ ಗಾಡಿಯಲ್ಲಿ ಭದ್ರಾವತಿ ಕಡೆ ಬರುವಾಗ ವಿನಾಯಕ ಇಂಡಸ್ಟ್ರೀಸ್ ಬಳಿ ಶರವಣ ಎತ್ತಿನಗಾಡಿಯಿಂದ ಇದ್ದಕ್ಕಿದ್ದಂತೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.