ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅಂಬಾರಗೋಡ್ಲು- ಕಳಸವಳ್ಳಿ ನಡುವೆ, ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಿರುವ ನೂತನ ತೂಗು ಸೇತುವೆ ಮಂಗಳವಾರ ಉದ್ಘಾಟನೆಯಾಗಿದೆ
ಸೇತುವೆಗೆ ‘ಸಿಗಂದೂರು ಚೌಡೇಶ್ವರಿ’ ಹೆಸರಿಡಲಾಗಿದೆ
ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸೇತುವೆಯನ್ನು ಉದ್ಘಾಟಿಸಿದ್ದಾರೆ
ಪ್ರವಾಹ, ಗಾಳಿಯ ಒತ್ತಡವನ್ನು ನಿಭಾಯಿಸುವ ಜೊತೆಗೆ 100 ಟನ್ ತಾಳಿಕೊಳ್ಳುವ ಸಾಮರ್ಥ್ಯ ಸೇತುವೆ ಹೊಂದಿದೆ
ಅಂಬಾರಗೋಡ್ಲು–ಕಳಸವಳ್ಳಿ ನಡುವೆ 2.44 ಕಿಲೋಮೀಟರ್ ಉದ್ದದ ತೂಗು ಸೇತುವೆ ನಿರ್ಮಾಣ ಆಗಿದೆ
ಶರಾವತಿ ಹಿನ್ನೀರು ಪೂರ್ಣ ಭರ್ತಿ ಆದಾಗ 150 ಅಡಿಯಷ್ಟು ಆಳ ನೀರು ಸಂಗ್ರಹವಾಗಿರುತ್ತದೆ. ಹೀಗಾಗಿ ಸೇತುವೆಯನ್ನು ಅಂತರರಾಷ್ಟ್ರೀಯ ಗುಣಮಟ್ಟದ ಉತ್ಕೃಷ್ಟ ತಾಂತ್ರಿಕತೆ ಬಳಸಿ ವಿನ್ಯಾಸಗೊಳಿಸಲಾಗಿದೆ.
740 ಮೀಟರ್ ದೂರ ಕೇಬಲ್ ನೆರವಿನಿಂದ ಇರುವ ತೂಗು ಸೇತುವೆ ಆಗಿದ್ದು, ನಾಲ್ಕು ಪಿಲ್ಲರ್‌ಗಳ ಮೇಲೆ ನಿಂತಿದೆ
ಸೇತುವೆಯನ್ನು ಸ್ಥಳೀಯರು ಮಾವಿನ ತೋರಣ- ತಳಿರುಗಳಿಂದ ಅಲಂಕರಿಸಿದ್ದರು
ಸೇತುವೆಯನ್ನು ₹573 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ
2019ರ ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭವಾಯಿತು
ಕೋವಿಡ್ ಮತ್ತಿತರ ಕಾರಣಕ್ಕೆ ಮೂರು ವರ್ಷಗಳಲ್ಲಿ ಮುಗಿಯಬೇಕಿದ್ದ ಕಾಮಗಾರಿ ಐದೂವರೆ ವರ್ಷ ತೆಗೆದುಕೊಂಡಿತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.