
ಸಾಗರ : ಜೋಗ ಸಮೀಪ ನಿರ್ಮಿಸಲು ಉದ್ದೇಶಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನಾ ಪ್ರದೇಶಕ್ಕೆ ಭೇಟಿ ನೀಡಲು ಶನಿವಾರ ಬಂದಿದ್ದ ಕೇಂದ್ರ ವನ್ಯಜೀವಿ ಮಂಡಳಿ ತಂಡವನ್ನು ಸಾಗರ ಪ್ರವಾಸಿ ಮಂದಿರದಲ್ಲಿ ಪರಿಸರವಾದಿಗಳು ಭೇಟಿಯಾಗಿ ಮನವಿ ಸಲ್ಲಿಸಿದರು.
ಮಂಡಳಿಯ ಸದಸ್ಯರಾದ ಹರಿಶಂಕರ್ ಸಿಂಗ್ ಮತ್ತು ರಮಣ್ ಸುಕುಮಾರ್, ರಾಷ್ಟ್ರೀಯ ಹುಲಿ ಪ್ರಾಧಿಕಾರದ ಅಧಿಕಾರಿ ಶಿವಕುಮಾರ್ ಅವರನ್ನು ಒಳಗೊಂಡ ತಂಡದ ಜೊತೆ ಪರಿಸರವಾದಿಗಳು ಯೋಜನೆ ಕುರಿತು ಚರ್ಚೆ ನಡೆಸಿದರು. ನಂತರ ಅಹವಾಲು ಸಲ್ಲಿಸಿದರು.
ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಒಕ್ಕೂಟ, ಜನಸಂಗ್ರಾಮ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಅಖಿಲೇಶ್ ಚಿಪ್ಪಳಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಆಗುವ ಸಾಧಕ ಬಾಧಕಗಳ ಕುರಿತು ತಂಡದ ಗಮನ ಸೆಳೆದರು.
ನಿವೃತ್ತ ನ್ಯಾಯಾಧೀಶರಾದ ಸಿ.ಬಿ.ಮನೋಹರ ಕುಮಾರ್ ಯೋಜನೆ ವಿರುದ್ದ ತಮ್ಮ ಅಹವಾಲು ಸಲ್ಲಿಸಿದರು.
ಸಭೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, ಪ್ರಮುಖರಾದ ಶಂಕರ ಶರ್ಮ, ಚಂದ್ರಕಾಂತ್ ಕೊಚ್ರೇಕರ್, ಅಜಿತ್ ಹೆಗಡೆ, ಪ್ರೊ. ಬಿ.ಎಂ.ಕುಮಾರಸ್ವಾಮಿ, ಡಾ. ಶ್ರೀಪತಿ, ಡಾ. ಗಿರೀಶ್ ಜನ್ನೆ, ಡಾ. ಸವಿನಯ, ಅನಂತ ಹೆಗಡೆ ಅಶೀಸರ, ವೆಂಕಟೇಶ್, ಉದಯ್ ಸಾಗರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.