ADVERTISEMENT

ಕ್ರಸ್ಟ್ ಗೇಟ್ ಮಟ್ಟ ತಲುಪಿದ ಶರಾವತಿ: ಬಾಗಿನ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 6:25 IST
Last Updated 20 ಆಗಸ್ಟ್ 2020, 6:25 IST
ಕಾರ್ಗಲ್ ಸಮೀಪದ ಲಿಂಗನಮಕ್ಕಿ ಜಲಾಶಯದ ನೀರು ಕ್ರಸ್ಟ್ ಗೇಟ್ ಮಟ್ಟ ದಾಟಿದ ಕಾರಣ ಕೆಪಿಸಿ ನಿಗಮದಿಂದ ಬಾಗಿನ ಅರ್ಪಿಸಲಾಯಿತು
ಕಾರ್ಗಲ್ ಸಮೀಪದ ಲಿಂಗನಮಕ್ಕಿ ಜಲಾಶಯದ ನೀರು ಕ್ರಸ್ಟ್ ಗೇಟ್ ಮಟ್ಟ ದಾಟಿದ ಕಾರಣ ಕೆಪಿಸಿ ನಿಗಮದಿಂದ ಬಾಗಿನ ಅರ್ಪಿಸಲಾಯಿತು   

ಕಾರ್ಗಲ್:ಸಮುದ್ರ ಮಟ್ಟದಿಂದ 1795 ಅಡಿ ಎತ್ತರದಲ್ಲಿರುವ ಕ್ರಸ್ಟ್ ಗೇಟ್ ಮಟ್ಟಕ್ಕೆ ಲಿಂಗನಮಕ್ಕಿ ಜಲಾಶಯದ ನೀರು ತಲುಪಿದ ಕಾರಣ ಶರಾವತಿ ನದಿಗೆ ಕೆಪಿಸಿ ನಿಗಮದ ಅಧಿಕಾರಿಗಳುಬುಧವಾರ ಬಾಗಿನ ಅರ್ಪಿಸಿದರು.

ಒಂದು ವರ್ಷ ನಾಡಿಗೆ ಬೆಳಕು ನೀಡಲು ಕ್ರಸ್ಟ್ ಗೇಟ್ ಮಟ್ಟದ ನೀರು ಸಹಕಾರಿಯಾಗಲಿದೆ ಎನ್ನುವುದು ಕೆಪಿಸಿ ತಾಂತ್ರಿಕ ವರ್ಗದ ಅಭಿಪ್ರಾಯ. ಸಾಂಪ್ರದಾಯಿಕವಾಗಿ ಗಂಗಾಪೂಜೆ ಸಲ್ಲಿಸಿ, ರೇಷ್ಮೆ ಝರಿ ಸೀರೆಯನ್ನು ಬಾಗಿನದಲ್ಲಿ ಇರಿಸಿ ನದಿಗೆ ಅರ್ಪಿಸಿದರು.

1819 ಅಡಿ ಗರಿಷ್ಠ ಮಟ್ಟದಲ್ಲಿರುವ ಅಣೆಕಟ್ಟೆಯಲ್ಲಿ ಕ್ರಸ್ಟ್‌ ಗೇಟ್‌ಗಳು 24 ಅಡಿ ಎತ್ತರವನ್ನು ಹೊಂದಿವೆ. ಹಾಲಿ ಜಲಾಶಯದ ಮಟ್ಟ 1801.75 ಅಡಿ ಇದ್ದು, ಭರ್ತಿಯಾಗಲು ಇನ್ನು 17 ಅಡಿ ಬಾಕಿ ಇದೆ. ನೀರಿನ ಒಳಹರಿವು 30 ಸಾವಿರ ಕ್ಯುಸೆಕ್‌ ಇದ್ದು, ಶೇ 66ರಷ್ಟು ಭಾಗ ಡ್ಯಾಂ ತುಂಬಿದಂತಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದರು.

ADVERTISEMENT

ಕೆಪಿಸಿ ವಿದ್ಯುತ್ ವಿಭಾಗದ ಮುಖ್ಯ ಎಂಜಿನಿಯರ್ ನಾರಾಯಣ ಪಿ. ಗಜಕೋಶ್, ಸಿವಿಲ್ ವಿಭಾಗದ ಅಧೀಕ್ಷಕ ಎಂಜಿನಿಯರ್ ಆರ್. ಶಿವಕುಮಾರ್, ಎಚ್.ಆರ್.ಡಿ ಭಾವೀಕಟ್ಟೆ, ಅಧಿಕಾರಿ ಎಚ್.ಎಲ್. ರಮೇಶ್, ಹಣಕಾಸು ಅಧಿಕಾರಿ ಗಿಡ್ಡಪ್ಪ ಗೌಡ, ಕಾರ್ಮಿಕ ಮುಖಂಡರಾದ ಕೆ. ವೀರೇಂದ್ರ, ಎಚ್.ಆರ್. ಮಲ್ಲಿಕಾರ್ಜುನ ಸ್ವಾಮಿ, ನಾಗರಾಜ, ಕೇಶವ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.