ADVERTISEMENT

ಶಿಕಾರಿಪುರ | ಬಸ್‌ ಚಕ್ರದಡಿ ಸಿಲುಕಿ ನಾಡಬಾಂಬ್ ಸ್ಫೋಟ: ತಪ್ಪಿದ ಅನಾಹುತ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 18:01 IST
Last Updated 1 ಡಿಸೆಂಬರ್ 2025, 18:01 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಶಿಕಾರಿಪುರ (ಶಿವಮೊಗ್ಗ): ತಾಲ್ಲೂಕಿನ ಹಿರೇಕಲವತ್ತಿ ಗ್ರಾಮದ ಬಳಿ ಸೋಮವಾರ ರಸ್ತೆ ಮೇಲೆ ಬಿದ್ದಿದ್ದ ನಾಡಬಾಂಬ್‌ ಕೆಎಸ್‌ಆರ್‌ಟಿಸಿ ಬಸ್ ಚಕ್ರದ ಅಡಿ ಸಿಲುಕಿ ಸ್ಫೋಟಗೊಂಡಿದೆ.

ಸ್ಫೋಟದ ತೀವ್ರತೆ ಕಡಿಮೆ ಇದ್ದುದರಿಂದ ಅವಘಡ ತಪ್ಪಿದೆ. ಬಸ್‌ನಲ್ಲಿ ಅಧಿಕ ಪ್ರಯಾಣಿಕರು ಇರಲಿಲ್ಲ. ಯಾರಿಗೂ ಗಂಭೀರ ಗಾಯಗಳಾಗಿಲ್ಲ.

ADVERTISEMENT

ಮುಡಬಸಿದ್ಧಾಪುರದಿಂದ ಶಿಕಾರಿಪುರಕ್ಕೆ ಹೊರಟಿದ್ದ ಬಸ್ ಹಿರೇಕಲವತ್ತಿ ಬಳಿ ಬಂದಾಗ ಅವಗಢ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್‌ ರಸ್ತೆ ಪಕ್ಕದ ಟ್ರಾನ್ಸ್‌ಫಾರ್ಮರ್‌ಗೆ ಡಿಕ್ಕಿ ಹೊಡೆದು ನಿಂತಿದೆ. 

ರಸ್ತೆಯಲ್ಲಿ ಉದ್ದೇಶಪೂರ್ವಕವಾಗಿ ನಾಡಬಾಂಬ್‌ ಇರಿಸಲಾಗಿದೆಯೇ ಅಥವಾ ಯಾರಾದರೂ ಜಮೀನಿನಲ್ಲಿ ಹಂದಿಗಳ ಕಾಟ ತಡೆಗೆ ಒಯ್ಯುವಾಗ ಬೀಳಿಸಿರಬಹುದೇ ಎಂದು ಖಚಿತವಾಗಿಲ್ಲ.

ಈ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ನಡೆಸಲು ಕೋರಲಾಗಿದೆ ಎಂದು ಬಸ್ ಚಾಲಕ ಬಸವರಾಜ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.