ADVERTISEMENT

ನೋವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 3:17 IST
Last Updated 19 ಡಿಸೆಂಬರ್ 2025, 3:17 IST
ಬಣ್ಣದನೂಲು ಪರಮೇಶಣ್ಣ
ಬಣ್ಣದನೂಲು ಪರಮೇಶಣ್ಣ   

ಶಿಕಾರಿಪುರ: ಪಟ್ಟಣದ ಮಂಡಿಪೇಟೆ ನಿವಾಸಿ ಟೈಪಿಂಗ್ ಇನ್‌ಸ್ಟಿಟ್ಯೂಟ್ ಮಾಲೀಕರಾಗಿದ್ದ ಬಣ್ಣದನೂಲು ಪರಮೇಶಣ್ಣ(77) ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದು, ನೋವಿನಲ್ಲಿರುವ ಅವರ ಕುಟುಂಬದವರು ಅವರ ದೇಹವನ್ನು ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಕಾಲೇಜಿಗೆ ದಾನ ಮಾಡಿದ್ದಾರೆ.

ಪಟ್ಟಣದ ಹೋಟೆಲ್‌ನಲ್ಲಿ ಸ್ನೇಹಿತರೊಂದಿಗೆ ತಿಂಡಿ ತಿಂದು, ಕಾಫಿ ಕುಡಿಯುವಾಗ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ನಿಧನರಾದರು. ಅವರ ಮಗ 10 ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಪತ್ನಿ ಜನವರಿಯಲ್ಲಿ ಮೃತಪಟ್ಟಿದ್ದರು. ಸೊಸೆ ಹಾಗೂ 6 ವರ್ಷದ ಮೊಮ್ಮಗನೊಂದಿಗೆ ಅವರು ವಾಸವಿದ್ದರು. ತವರುಮನೆ ಹರಿಹರದಲ್ಲಿ ಇದ್ದ ಸೊಸೆಗೆ ದೂರವಾಣಿ ಮೂಲಕ ಮಾತನಾಡಿದ್ದ ಅವರು ಮೊಮ್ಮಗನ ಹುಟ್ಟುಹಬ್ಬಕ್ಕೆ ಬರುತ್ತೇನೆ ಕೇಕ್ ತರಿಸುವಂತೆ ಹೇಳಿಪ್ರಯಾಣಕ್ಕೆ ಸಿದ್ಧತೆ ನಡೆಸಿದ್ದರು. ಆದರೆ ವಿಧಿಯಾಟ ಅವರೆ ಇಹಲೋಕ ತ್ಯಜಿಸಿದರು. ಅವರ ಇಚ್ಛೆಯಂತೆ ಮೃತದೇಹ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಕಾಲೇಜಿಗೆ ನೀಡಿದ್ದಾರೆ.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಎಸ್.ಶಾಂತವೀರಪ್ಪಗೌಡ, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜಗೌಡ ಸೇರಿದಂತೆ ನೂರಾರು ಜನ ಮೃತರ ಅಂತಿಮದರ್ಶನ ಪಡೆದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.