
ಶಿಕಾರಿಪುರ: ಅಂಗವಿಕಲರಾಗಿದ್ದರೂ ಕೃಷಿ, ಸ್ವಯಂ ಉದ್ಯೋಗ ಮಾಡಿಕೊಂಡು ಸ್ವಾವಲಂಬಿಯಾಗಿದ್ದ ತಾಲ್ಲೂಕಿನ ಎ.ಅಣ್ಣಾಪುರ ಗ್ರಾಮದ ಸತ್ಯನಾರಾಯಣ(46) ಅವರ ಮೃತದೇಹ ಪಟ್ಟಣದ ಪ್ರವಾಸಿ ಮಂದಿರದ ಬಳಿ ಬುಧವಾರ ರಾತ್ರಿ ಪತ್ತೆಯಾಗಿದೆ.
ಗ್ರಾಮದಿಂದ ಶಿಕಾರಿಪುರಕ್ಕೆ ತೆರಳುವುದಾಗಿ ಹೇಳಿ ಹೋಗಿದ್ದ ಸತ್ಯನಾರಾಯಣ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಅವರ ಮೃತದೇಹ ಪ್ರವಾಸಿ ಮಂದಿರದಲ್ಲಿ ಇರುವುದಾಗಿ ಸಾರ್ವಜನಿಕರು ದೂರವಾಣಿ ಮೂಲಕ ಹೇಳಿದಾಗ ವಿಷಯ ಬೆಳಕಿಗೆ ಬಂದಿದೆ. ಮರಣೋತ್ತರ ಪರೀಕ್ಷೆ ನಡೆಸಿ ಅವರ ಸಾವಿಗೆ ಕಾರಣ ಪತ್ತೆ ಹಚ್ಚಬೇಕು ಎಂದು ಕುಟುಂಬದವರು ಠಾಣೆಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.
ತಾಯಿ, ಇಬ್ಬರು ತಮ್ಮ, ತಂಗಿಯೊಂದಿಗೆ ವಾಸವಿದ್ದ ಸತ್ಯನಾರಾಯಣ ಕೃಷಿಯೊಂದಿಗೆ, ಮರಗೆಲಸ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸುತ್ತಿದ್ದರು. ಬೆಳೆಸಾಲ ಸೇರಿದಂತೆ ಹಲವು ಸಾಲದ ಹೊರೆ ಅವರ ಮೇಲಿತ್ತು ಎಂದು ಕುಟುಂಬ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.