
ಸಾವು (ಪ್ರಾತಿನಿಧಿಕ ಚಿತ್ರ)
ಶಿಕಾರಿಪುರ: ತಾಲ್ಲೂಕಿನ ಕಣಿವೆಮನೆ ಸಮೀಪಬೈಕ್‌ಗೆ ಬೊಲೆರೊ ಜೀಪ್ ಬುಧವಾರ ರಾತ್ರಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಾಲ್ಲೂಕಿನ ಭದ್ರಾಪುರ ಗ್ರಾಮದ ಕಿರಣಕುಮಾರ (40), ಪಟ್ಟಣದ ಕುಂಬಾರಗುಂಡಿ ವಾಸಿ ಶಿವರಾಜು (42) ಮೃತಪಟ್ಟ ಬೈಕ್ ಸವಾರರು.
ಬೈಕ್, ಬೊಲೆರೊ ಶಿಕಾರಿಪುರ ಕಡೆಗೆ ಬರುತ್ತಿದ್ದವು, ಶಾಂತಿವನ ಸಮೀಪ ಡಿಕ್ಕಿಯಾಗಿದ್ದು ಬೊಲೆರೊ ಅಡಿಗೆ ಸಿಲುಕಿದ ಬೈಕ್ 800ಮೀಟರ್ ದೂರದವರೆಗೂ ಎಳೆದುಕೊಂಡು ಹೋಗಿದೆ. ಬೈಕ್ ಸವಾರರಿಬ್ಬರೂ ವಾಹನದ ತಳಗೆ ಸಿಲುಕಿದ್ದರ ಪರಿಣಾಮ ರಕ್ತ ರಸ್ತೆಯಲ್ಲೆಲ್ಲಾ ಚೆಲ್ಲಾಡಿತ್ತು. ಮೃತಪಟ್ಟ ಶಿವರಾಜು ದಾವಣಗೆರೆ ಜಿಲ್ಲೆ ಬಸವಾಪಟ್ಟಣ ನಿವಾಸಿಯಾಗಿದ್ದು ಕೆಲ ವರ್ಷಗಳಿಂದ ಪಟ್ಟಣದಲ್ಲಿ ಮನೆ ಮಾಡಿಕೊಂಡು ವಾಸವಿದ್ದರು.
ಕಿರಣಕುಮಾರ, ಶಿವರಾಜು ಇಬ್ಬರೂ ಒಬ್ಬರೆ ಮೇಸ್ತ್ರಿ ಬಳಿ ಗಾರೆ ಕೆಲಸ ಮಾಡುತ್ತಿದ್ದರು.
ಉಡುಗಣಿ ಮಾರಿಹಬ್ಬದ ಊಟಕ್ಕಾಗಿ ಇಬ್ಬರೂ ತೆರಳಿದ್ದರು ವಾಪಸ್ ಬರುವಾಗ ಅಪಘಾತ ಸಂಭವಿಸಿದೆ.
ಕಿರಣ್‌ಕುಮಾರ್ ಹೆಂಡತಿ, ತಾಯಿ 12ವರ್ಷದೊಳಗಿನ ಮೂರು ಪುತ್ರಿಯರೊಂದಿಗೆ ವಾಸವಾಗಿದ್ದರು. ಶಿವರಾಜು ಹೆಂಡತಿ, 5ವರ್ಷದೊಳಗಿನ ಇಬ್ಬರು ಪುತ್ರಿಯರೊಂದಿಗೆ ವಾಸವಾಗಿದ್ದರು. ಅಪಘಾತದಿಂದಾಗಿ ಎರಡೂ ಕುಟುಂಬದಲ್ಲಿ ದುಡಿಯುವವರು ಇಲ್ಲದಾಗಿದ್ದು ಎರಡೂ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.