ADVERTISEMENT

ಪುನೀತ್‌ ಸ್ಮರಣಾರ್ಥ ಕುಸ್ತಿ ಪಂದ್ಯಾವಳಿ: ನೇಪಾಳದ ಕುಸ್ತಿಪಟು ದೇವ್‌ತಾಪ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 3:01 IST
Last Updated 24 ಜನವರಿ 2026, 3:01 IST
ಶಿಕಾರಿಪುರದಲ್ಲಿ ಪಟ್ಟಣದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯಕುಸ್ತಿ ಪಂದ್ಯಾವಳಿಯ ಪೋಸ್ಟರ್ ಬಿಡುಗಡೆ ಮಾಡಲಾಯಿತು
ಶಿಕಾರಿಪುರದಲ್ಲಿ ಪಟ್ಟಣದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯಕುಸ್ತಿ ಪಂದ್ಯಾವಳಿಯ ಪೋಸ್ಟರ್ ಬಿಡುಗಡೆ ಮಾಡಲಾಯಿತು   

ಶಿಕಾರಿಪುರ: ನಟ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಅಂತರರಾಷ್ಟ್ರೀಯ ಮಟ್ಟದ ಜಂಗೀಕುಸ್ತಿ ಪಂದ್ಯಾವಳಿ ಪಟ್ಟಣದ ಮಾರಿಕಾಂಬಾ ರಂಗಮಂದಿರದ ಆವರಣದಲ್ಲಿ ಜ.26 ಮಧ್ಯಾಹ್ನ 3ಕ್ಕೆ ನಡೆಯಲಿದೆ ಎಂದು ಕುಸ್ತಿ ಸಮಿತಿ ಅಧ್ಯಕ್ಷ ಸಂದೀಪ್ ಗೋಣಿ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 25 ಜೋಡಿ ಕುಸ್ತಿ ನಡೆಯಲಿದ್ದು, ಕಜಕಸ್ತಾನದ ಕುಸ್ತಿಪಟು ಜಾನ್, ನೇಪಾಳದ ಕುಸ್ತಿಪಟು ದೇವ್‌ತಾಪ ಸೇರಿದಂತೆ ಸುಪ್ರಸಿದ್ಧ ಕುಸ್ತಿಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. 

₹3 ಲಕ್ಷ ಮೊದಲ ಬಹುಮಾನ, ₹1.5 ಲಕ್ಷ ಎರಡನೇ ಬಹುಮಾನ, ₹1 ಲಕ್ಷ ಮೂರನೇ ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಸ್ಥಳೀಯ ಕುಸ್ತಿಪಟುಗಳಿಗೆ ಉತ್ತಮ ಬಹುಮಾನದೊಂದಿಗೆ ಕುಸ್ತಿ ಪಂದ್ಯ ನಡೆಸಲಾಗುವುದು ಎಂದು ಹೇಳಿದರು.

ADVERTISEMENT

ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ, ಮುಖಂಡ ಎಂ.ಶ್ರೀಕಾಂತ್, ಗೋಣಿ ಮಾಲತೇಶ್ ಆಗಮಿಸಲಿದ್ದಾರೆ. ಕುಸ್ತಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.

ಎಸ್.ಎಸ್.ರಾಘವೇಂದ್ರ, ಗಿಡ್ಡಪ್ಪ ಮಟ್ಟೇರ್, ರಮೇಶ್, ನವೀನ್‌ಶೆಟ್ಟಿ, ಸುಹಾಸ್‌ಭಟ್ಟ ಗೋಷ್ಠಿಯಲ್ಲಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.