ADVERTISEMENT

ನವದೆಹಲಿ: ವಿಶ್ವ ಎಐ ಸಮ್ಮೇಳನದಲ್ಲಿ ಶಿಕಾರಿಪುರದ ವಿದ್ಯಾರ್ಥಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 4:29 IST
Last Updated 18 ಫೆಬ್ರುವರಿ 2026, 4:29 IST
ಧ್ರುವ ಮಲ್ಲಾಡದ
ಧ್ರುವ ಮಲ್ಲಾಡದ   

ಶಿಕಾರಿಪುರ: ನವದೆಹಲಿಯಲ್ಲಿ ನಡೆಯಲಿರುವ ಎಐ ಪರಿಣಾಮ ಕುರಿತ ವಿಶ್ವ ಸಮ್ಮೇಳನದಲ್ಲಿ ಪಟ್ಟಣದ ಅಕ್ಷರ ವಸತಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. 

ಶಾಲೆಯ ಸಿಐಎಸ್‌ಸಿಇ ಪಠ್ಯಕ್ರಮದ 9ನೇ ತರಗತಿಯ ಜಿ.ಸಂಭ್ರಮ್, ಧ್ರುವ ಮಲ್ಲಾಡದ ಫೆ.20ರವರೆಗೆ ನಡೆಯಲಿರುವ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಇವರು ಎಐ ಆ್ಯಪ್‌ಗಳ ಕಾರ್ಯನಿರ್ವಹಣೆ ಬಗ್ಗೆ ಮಾದರಿ ರೂಪಿಸಿದ್ದು, ಇದರ ಪ್ರದರ್ಶನದ ಜೊತೆಗೆ ವಿಷಯ ಮಂಡಿಸಲಿದ್ದಾರೆ. 

ADVERTISEMENT

ಇವರನ್ನು ಶಾಲಾ ಆಡಳಿತ ಮಂಡಳಿ, ಪೋಷಕರು, ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.  

ಜಿ.ಸಂಭ್ರಮ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.