ಶಿಕಾರಿಪುರ: ತಾಲ್ಲೂಕಿನ ಭೋವಿ ಗ್ರಾಮದ ಅಡಿಕೆ ತೋಟದಲ್ಲಿ ಅಪರಿಚಿತರು ವಾಮಾಚಾರ ನಡೆಸಿದ ಕುರುಹು ಬುಧವಾರ ಪತ್ತೆಯಾಗಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಗ್ರಾಮದ ರೇವಣಿನಾಯ್ಕ ಕುಟುಂಬಕ್ಕೆ ಸೇರಿದ ತೋಟದಲ್ಲಿ ಮಡಕೆ, ನಿಂಬೆಹಣ್ಣು, ಮೂರು ಗೊಂಬೆ, ಶಂಕು, ತ್ರಿಶೂಲ, ಸ್ಮಶಾನ ಬೂದಿ, ತಾಮ್ರದ ಯಂತ್ರ, ತಾಯತ ಇಟ್ಟಿದ್ದು, ವಾಮಾಚಾರ ಮಾಡಿರುವಂತಿದೆ.
‘ನಮ್ಮ ತೋಟದಲ್ಲಿ ಇಳುವರಿ ಕುಸಿತವಾಗಲಿ ಎಂದು ಯಾರೋ ನಮಗೆ ಆಗದವರು ವಾಮಾಚಾರ ಮಾಡಿರಬಹುದು’ ಎಂದು ತೋಟದ ಮಾಲೀಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.