ಶಿವಮೊಗ್ಗ: ‘ಯೋಗ ಎಲ್ಲರನ್ನೂ ಒಂದುಗೂಡಿಸುವ ಒಂದು ಮಾರ್ಗ. ಪ್ರತಿನಿತ್ಯ ನಾವು ಯೋಗ ಮಾಡುವ ಮೂಲಕ ಸಹಬಾಳ್ವೆಯಿಂದ ಬದುಕಲು ಸಾಧ್ಯ’ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಮಹಾನಗರ ಪಾಲಿಕೆಯಿಂದ ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಯೋಗ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಯೋಗಕ್ಕೆ ಅಸಾಧ್ಯವಾದದ್ದನ್ನು ಸಾಧ್ಯವಾಗಿಸುವ ಶಕ್ತಿ ಇದೆ. ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು’ ಎಂದು ಸಲಹೆ ನೀಡಿದರು.
‘ಮುಂದಿನ ದಿನಗಳಲ್ಲಿ ಇನ್ನೂ ಅದ್ದೂರಿಯಾಗಿ ಯೋಗ ದಸರಾ ಆಚರಿಸೋಣ. ಎಲ್ಲರೂ ಪ್ರತಿನಿತ್ಯ ಯೋಗ ಮಾಡಿ ಆರೋಗ್ಯದಿಂದ ಇರಿ’ ಎಂದು ಪಾಲಿಕೆ ಆಯುಕ್ತ ಕೆ. ಮಾಯಣ್ಣಗೌಡ ಸಲಹೆ ನೀಡಿದರು.
ರಾಘವೇಂದ್ರ ಯೋಗ ಕೇಂದ್ರದ ಗೋಪಾಲಕೃಷ್ಣ ಅವರು ಯೋಗ ಕಾರ್ಯಕ್ರಮ ನಡೆಸಿಕೊಟ್ಟರು.
ನಂತರ ಪ್ರಾಣಾಯಾಮ ತರಗತಿಯನ್ನು ಶಿವಗಂಗಾ ಯೋಗ ಕೇಂದ್ರದ ಗುರು ಸಿ.ವಿ.ರುದ್ರಾರಾಧ್ಯ ನಡೆಸಿಕೊಟ್ಟರು. ಧ್ಯಾನ ಕಾರ್ಯಕ್ರಮವನ್ನು ಕಣಾದ ಯೋಗ ಕೇಂದ್ರದ ಗುರು ಅನಿಲ್ ಕುಮಾರ್ ಶೆಟ್ಟರ್ ನಡೆಸಿಕೊಟ್ಟರು.
ಬೆಂಗಳೂರಿನ ಸುಬ್ರಹ್ಮಣ್ಯನ್, ಭಾ.ಮ. ಶ್ರೀಕಂಠ, ಅರವಿಂದ, ರಾಜಶೇಖರ್, ಸಂಜಯ್, ಬೆಳಗುರು ಮಂಜುನಾಥ್, ವೈದ್ಯನಾಥ್, ಓಂಕಾರ್, ಜಗದೀಶ್, ವಿಜಯಾ, ಬಸವರಾಜ್, ಮಂಜುಳಾ, ಜಿ.ವಿಜಯಕುಮಾರ್, ನಾಗರಾಜ್, ಸುಧಾಕರ್ ಬಿಜೂರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.