ADVERTISEMENT

ಶಿವಮೊಗ್ಗ | ಸರಕು ಅಡಿಕೆಗೆ ದಾಖಲೆ ಬೆಲೆ; ಕ್ವಿಂಟಲ್‌ಗೆ ₹98,896

-

​ಪ್ರಜಾವಾಣಿ ವಾರ್ತೆ
Published 13 ಮೇ 2025, 15:54 IST
Last Updated 13 ಮೇ 2025, 15:54 IST
ಅಡಿಕೆ
ಅಡಿಕೆ   

ಶಿವಮೊಗ್ಗ: ಈ ವರ್ಷ ಸರಕು ಅಡಿಕೆ ಬೆಲೆಯು ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ.

ಇಲ್ಲಿನ ಎಪಿಎಂಸಿಯಲ್ಲಿ ಮಂಗಳವಾರ ಸರಕು (ಹಸ) ಅಡಿಕೆ ದರ ಕ್ವಿಂಟಲ್‌ಗೆ ₹98,896, ಬೆಟ್ಟೆ ಕ್ವಿಂಟಲ್‌ಗೆ ₹58,709 ಹಾಗೂ ರಾಶಿ ಅಡಿಕೆ ಕ್ವಿಂಟಲ್‌ಗೆ ₹57,059ಕ್ಕೆ ಮಾರಾಟವಾಗಿದೆ.

ಎಪಿಎಂಸಿಗೆ 9 ಕ್ವಿಂಟಲ್‌ ಸರಕು ಅಡಿಕೆ, 488 ಕ್ವಿಂಟಲ್ ರಾಶಿ ಅಡಿಕೆ ಹಾಗೂ 231 ಕ್ವಿಂಟಲ್ ಗೊರಬಲು ಹಾಗೂ 26 ಕ್ವಿಂಟಲ್ ಬೆಟ್ಟೆ ಅಡಿಕೆ ಆವಕವಾಗಿತ್ತು.

ADVERTISEMENT

ಜನವರಿಯಲ್ಲಿ ಕೊಯ್ಲು ಮುಗಿದಿದ್ದು, ಕಳೆದ ವರ್ಷದ ಅಡಿಕೆ ಬಹುತೇಕ ಮಾರಾಟವಾಗಿದೆ. ಬೆಳೆಗಾರರು ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ ಅಡಿಕೆಯನ್ನು ಈಗ ಮಾರುಕಟ್ಟೆಗೆ ತರುತ್ತಿದ್ದಾರೆ. ಬೇಡಿಕೆಯಷ್ಟು ಪೂರೈಕೆ ಆಗದ ಕಾರಣ ಬೆಲೆ ಏರಿಕೆ ಆಗಿದೆ ಎಂದು ಎಪಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.