ADVERTISEMENT

ಶಿವಮೊಗ್ಗ| ಜಾತಿ ಗಣತಿ, ಹಿಂದೂ ಸಮಾಜ ಒಡೆಯುವ ಕೆಲಸ: ಬಿವೈಆರ್ ಆರೋಪ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 6:17 IST
Last Updated 26 ಜನವರಿ 2026, 6:17 IST
ಶಿವಮೊಗ್ಗದಲ್ಲಿ ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದಿಂದ ನೂತನವಾಗಿ ನಿರ್ಮಿಸಿರುವ ಭಾವಸಾರ ಸಂಸ್ಕೃತಿ ಭವನವನ್ನು ಸಂಸದ ಬಿ.ವೈ.ರಾಘವೇಂದ್ರ ಭಾನುವಾರ ಉದ್ಘಾಟಿಸಿದರು
ಶಿವಮೊಗ್ಗದಲ್ಲಿ ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದಿಂದ ನೂತನವಾಗಿ ನಿರ್ಮಿಸಿರುವ ಭಾವಸಾರ ಸಂಸ್ಕೃತಿ ಭವನವನ್ನು ಸಂಸದ ಬಿ.ವೈ.ರಾಘವೇಂದ್ರ ಭಾನುವಾರ ಉದ್ಘಾಟಿಸಿದರು   

ಶಿವಮೊಗ್ಗ: ರಾಜ್ಯದ ಕಾಂಗ್ರೆಸ್‌ ಸರ್ಕಾರ ಜಾತಿಗಣತಿ ಮೂಲಕ ಹಿಂದೂ ಸಮಾಜವನ್ನು ಉಪ ಜಾತಿಗಳಾಗಿ ವಿಂಗಡಿಸಿ, ಒಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದಿಂದ ನೂತನವಾಗಿ ನಿರ್ಮಿಸಿದ ಭಾವಸಾರ ಸಂಸ್ಕೃತಿ ಭವನ ಉದ್ಘಾಟಿಸಿ ಭಾನುವಾರ ಮಾತನಾಡಿದರು.

ಫೆಬ್ರುವರಿಯಲ್ಲಿ ಕೇಂದ್ರ ಸರ್ಕಾರದಿಂದ ಅಧಿಕೃತ ಜನಗಣತಿ ಪ್ರಕ್ರಿಯೆ ಆರಂಭವಾಗಲಿದೆ. ಸಾರ್ವಜನಿಕರು ತಮ್ಮ ಜಾತಿ ಮತ್ತು ಧರ್ಮ ದಾಖಲಿಸುವಲ್ಲಿ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ADVERTISEMENT

ದೇಶ ಕಟ್ಟುವ ಕಾರ್ಯ ಭಾವಸಾರ ಕ್ಷತ್ರಿಯ ಸಮಾಜ ಮಾಡುತ್ತಾ ಬಂದಿದೆ. ಸ್ವಾತಂತ್ರ್ಯ ಸಂಗ್ರಾಮ, ತುರ್ತು ಪರಿಸ್ಥಿತಿ ಸೇರಿದಂತೆ ಹಲವು ಹೋರಾಟಗಳಲ್ಲಿ ಭಾವಸಾರರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಗರದಲ್ಲಿ ಸಮಾಜದ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಅಗತ್ಯವಿರುವ ಎಲ್ಲ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

ಜಿಲ್ಲಾ ಎಐಬಿಕೆಎಂ ಅಧ್ಯಕ್ಷ ಸುರೇಶ್ ಬೇದ್ರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಐಬಿಕೆ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ರಾಜು ಬಿ.ಜವಳ್ಕರ್, ರಾಜ್ಯ ಘಟಕದ ಅಧ್ಯಕ್ಷ ಶ್ರೀನಿವಾಸ್ ರಾವ್ ಪಿಸ್ಸೆ, ಉಪಾಧ್ಯಕ್ಷ ಓಂಪ್ರಕಾಶ್ ತೇಲ್ಕರ್, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಡಾ.ಧನಂಜಯ ಸರ್ಜಿ, ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮುಖಂಡರಾದ ಸತ್ಯನಾರಾಯಣ, ಗಜೇಂದ್ರನಾಥ್ ಮಾಳೋದೆ, ಕೆ.ಟಿ. ಶ್ರೀನಿವಾಸ್, ವಿಜಯಕುಮಾರ್, ಡಿ.ಎನ್.ವಿನಾಯಕ್, ರಾಕೇಶ್ ಸಾಕ್ರೆ, ಪ್ರಭಾಕರ್ ಮತ್ತಿತರರಿದ್ದರು.