ADVERTISEMENT

ಶಿವಮೊಗ್ಗದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ತೀರ್ಮಾನ: ಡಿ. ಮಂಜುನಾಥ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 5:09 IST
Last Updated 1 ಫೆಬ್ರುವರಿ 2026, 5:09 IST
<div class="paragraphs"><p>ಶಿವಮೊಗ್ಗದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸಭೆ&nbsp;ನಡೆಯಿತು</p></div>

ಶಿವಮೊಗ್ಗದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸಭೆ ನಡೆಯಿತು

   

ಶಿವಮೊಗ್ಗ: ‘ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾರ್ಚ್ ಕೊನೆಯ ವಾರ ಎರಡು ದಿನ  ಏರ್ಪಡಿಸಲು ತೀರ್ಮಾನಿಸಲಾಗಿದೆ’ ಎಂದು ಅಧ್ಯಕ್ಷ ಡಿ. ಮಂಜುನಾಥ ತಿಳಿಸಿದ್ದಾರೆ.
          
ಸಾಹಿತ್ಯ ಗ್ರಾಮದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಮಾಡಲಾಯಿತು. ಕಸಾಪ ಸದಸ್ಯರ ಬಳಿ ಹೋಗೋಣ, ಅವರಿಂದ ದೇಣಿಗೆ ಪಡೆಯೋಣ. ಎಲ್ಲರೂ ಸಹಾಯ ಮಾಡಲಿದ್ದಾರೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.

‘ಪ್ರತಿನಿಧಿ ಶುಲ್ಕವಾಗಿ ₹ 200 ನಿಗದಿ ಮಾಡಲಾಯಿತು. ಸಮ್ಮೇಳನಕ್ಕೆ ಅಗತ್ಯವಾದ ಊಟ, ತಿಂಡಿ, ಶಾಮಿಯಾನ, ಇತರೆ ಖರ್ಚು ವೆಚ್ಚ ನಿಭಾಯಿಸಲು ದಾನಿಗಳ ಬಳಿ ನೆರವು ಕೇಳಲು ತೀರ್ಮಾನ ಮಾಡಲಾಯಿತು’ ಎಂದು ಹೇಳಿದ್ದಾರೆ.
        
ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲರನ್ನೂ ಅಭಿನಂದಿಸಲಾಯಿತು. ಕಜಾಪ ನೇತೃತ್ವದಲ್ಲಿ ಏಳನೇ ಜಿಲ್ಲಾ  ಜಾನಪದ ಸಮ್ಮೇಳನ ನಡೆಸುವುದು. ಹೊಸನಗರದಲ್ಲಿ ಸಾಹಿತ್ಯ ಹುಣ್ಣಿಮೆ ಏರ್ಪಡಿಸುವುದು ಸೇರಿದಂತೆ ಹಲವು ತೀರ್ಮಾನ ಮಾಡಲಾಯಿತು. 
           
ಉಮಾ ಕುಲಕರ್ಣಿ ಹಾಡು ಹೇಳಿದರು. ಕೆ.ಎಸ್.ಮಂಜಪ್ಪ ಸ್ವಾಗತಿಸಿದರು. ಎಂ.ಎಂ.ಸ್ವಾಮಿ ಹಿಂದಿನ ಸಭೆಯ ನಡಾವಳಿ ವಾಚಿಸಿದರು. ಡಿ. ಗಣೇಶ್ ವಂದಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.