ಬಂಧನ
ಶಿವಮೊಗ್ಗ: ಇಲ್ಲಿನ ಆಜಾದ್ ನಗರದ ಕ್ಲರ್ಕ್ ಪೇಟೆಯಲ್ಲಿ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ನೆಪದಲ್ಲಿ ಮನೆಯೊಂದಕ್ಕೆ ನುಗ್ಗಿ ದರೋಡೆಗೆ ಯತ್ನಿಸಿದ ಇಬ್ಬರು ಕಳ್ಳರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ತಸ್ಲಿಮಾ ಮತ್ತು ಅಸ್ಲಂ ಬಂಧಿತರು.
ಆಜಾದ್ ನಗರದ ಎರಡನೇ ತಿರುವಿನಲ್ಲಿರುವ ನವೀದ್ ಮತ್ತು ಅವರ ತಾಯಿ ದಿಲ್‌ಶಾದ್ ಅವರ ಮನೆಗೆ ತೆರಳಿದ ದುಷ್ಕರ್ಮಿಗಳು, ತಾವು ಗಣತಿ ಮಾಡಲು ಬಂದಿದ್ದು, ಆಧಾರ್ ಕಾರ್ಡ್ ನೀಡುವಂತೆ ಸೂಚಿಸಿದ್ದಾರೆ.
ಆಧಾರ್ ಕಾರ್ಡ್ ತರಲೆಂದು ಮನೆಯೊಳಗೆ ಹೋದಾಗ ಇಬ್ಬರೂ ಏಕಾಏಕಿ ಮನೆಯೊಳಗೆ ನುಗ್ಗಿ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದ್ದಾರೆ. ಅವರಿಂದ ತಪ್ಪಿಸಿಕೊಂಡ ದಿಲ್‌ಶಾದ್ ಕೂಡಲೇ ಮನೆಯಿಂದ ಹೊರಗೆ ಓಡಿ ಬಂದು ಅಕ್ಕಪಕ್ಕದವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳೀಯರು ಸೇರಿ ಅವರನ್ನು ಕೂಡಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.