ADVERTISEMENT

ಕುವೆಂಪು ರಂಗಮಂದಿರಕ್ಕೆ ‘ಸ್ಮಾರ್ಟ್‍ಸಿಟಿ’ ಅನುದಾನ: ಕೆ.ಬಿ.ಶಿವಕುಮಾರ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 19:45 IST
Last Updated 26 ಡಿಸೆಂಬರ್ 2019, 19:45 IST

ಶಿವಮೊಗ್ಗ: ‘ಸ್ಮಾರ್ಟ್‍ಸಿಟಿ’ ಯೋಜನೆಯಲ್ಲಿಕುವೆಂಪು ರಂಗಮಂದಿರ ಅಭಿವೃದ್ಧಿಪಡಿಸಲು ಸಕ್ಷಮ ಪ್ರಾಧಿಕಾರದ ಅಧಿಕಾರಿಗಳ ಜತೆಸಮಾಲೋಚನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕುವೆಂಪು ರಂಗಮಂದಿರ ನಿರ್ವಹಣಾ ಸಮಿತಿ ಸಭೆಯಲ್ಲಿ ಅವರುಮಾತನಾಡಿದರು.

ರಂಗಮಂದಿರದ ಒಳಗೆ ಹೊಸದಾದ ಆಸನಗಳ ಅಳವಡಿಕೆ,ಶೌಚಾಲಯ ದುರಸ್ತಿ, ಕಟ್ಟಡಕ್ಕೆಸುಣ್ಣ-ಬಣ್ಣ ಮಾಡಿಸಲುನಿರ್ಧರಿಸಲಾಗಿದೆ. ಹಣಕಾಸಿನ ಲಭ್ಯತೆ ನೋಡಿಕೊಂಡು ರಂಗಮಂದಿರದ ವೇದಿಕೆ ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲಾಗುವುದು. ಧ್ವನಿವರ್ಧಕವೂಶ್ರುತಿಸಹ್ಯವಾಗಿರುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ರಂಗಮಂದಿರದ ಹೊರಭಾಗದಬಯಲು ರಂಗಮಂದಿರದ ವೇದಿಕೆಯ ಮೇಲ್ಭಾಗದಲ್ಲಿ ಹೈಟೆನ್ಶನ್ ವಿದ್ಯುತ್ ತಂತಿಗಳು ಹಾದುಹೋಗಿವೆ. ಕಾರ್ಯಕ್ರಮ ನಡೆಸಲು ಅಡಚಣೆ ಇದೆ. ವಿದ್ಯುತ್ ತಂತಿಗಳನ್ನು ತೆರೆವುಗೊಳಿಸಬೇಕು ಎಂದುಮೆಸ್ಕಾಂಎಂಜಿನಿಯರ್‌ಗೆಸೂಚಿಸಿದರು.

ರಂಗಮಂದಿರದ ಬಾಡಿಗೆಗೆ ಕಡಿಮೆ ಇದೆ. ನಿರ್ವಹಣೆ ಕಷ್ಟಸಾಧ್ಯವಾಗಿದೆ. ಸರ್ಕಾರಿ ಶಾಲೆಗಳ ಕಾರ್ಯಕ್ರಮಗಳಿಗೆ ದರ ಇಳಿಸಿ, ಖಾಸಗಿ ಕಾರ್ಯಕ್ರಮಗಳಿಗೆ ಶೇ 10ರಿಂದ 25ರಷ್ಟು ಶುಲ್ಕ ಹೆಚ್ಚಿಸಬೇಕು.ರಂಗಮಂದಿರ ಕಾಯ್ದಿರಿಸಿದವರಿಗೆ ರಂಗಮಂದಿರದ ಬಲ ಭಾಗದ ಪಾರ್ಕಿಂಗ್ ಸ್ಥಳದಲ್ಲಿ ಸ್ಟಾಲ್ ಹಾಕಲು ಬಾಡಿಗೆ ಮತ್ತು ಕರಾರಿನ ಮೇಲೆ ಅನುಮತಿನೀಡಬಹುದು. ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅನುಪಯುಕ್ತ ವಸ್ತುಗಳ ವಿಲೇವಾರಿ ಮಾಡಲು ಅವರು ಸೂಚಿಸಿದರು.

ಹೆಚ್ಚುವರಿಜಿಲ್ಲಾಧಿಕಾರಿ ಜಿ.ಅನುರಾಧಾ,ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶ್ರೀಧರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.