ಶಿವಮೊಗ್ಗ: ಇಲ್ಲಿನ ಹೊನ್ನಾಳಿ ರಸ್ತೆ ಚೌಡೇಶ್ವರಿ ಕಾಲೊನಿಯ ಶಂಕರ ರೇಂಜ್ ನರ್ಸರಿಗೆ ಬಂದಿದ್ದ ಹಾವನ್ನು ಹಿಡಿಯಲು ಉರಗ ರಕ್ಷಕ ಸ್ನೇಕ್ ಕಿರಣ್ ಶುಕ್ರವಾರ ತೆರಳಿದ್ದ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳಾ ಕಾರ್ಮಿಕರು, ಮೈಮೇಲೆ ದೇವರು ಬಂದವರಂತೆ ವರ್ತಿಸಿದ್ದಾರೆ. ನೆಲದ ಮೇಲೆ ಹಾವಿನಂತೆ ಹೊರಳಾಡಿದ್ದಾರೆ. ಆ ವಿಡಿಯೊ ಈಗ ವೈರಲ್ಆಗಿದೆ.
ಸ್ನೇಕ್ ಕಿರಣ್ ನರ್ಸರಿಯಲ್ಲಿ ನಾಗರ ಹಾವು ಹಿಡಿದಿದ್ದು, ಅದನ್ನು ಪ್ಲಾಸ್ಟಿಕ್ ಬುಟ್ಟಿಯಲ್ಲಿ ಹಾಕಿ ತೋರಿಸುತ್ತಿದ್ದ ವೇಳೆ ಇಬ್ಬರು ಮಹಿಳೆಯರು ದೇವರು ಬಂದವರಂತೆ ವರ್ತಿಸಿದ್ದಾರೆ. ವಿಚಿತ್ರವಾಗಿ ಕೂಗಿದ್ದಾರೆ. ಅದರಲ್ಲಿ ಮಹಿಳೆಯೊಬ್ಬರು ‘ನಾನು ಬಂದಿರುವುದು ನಿಮ್ಮನ್ನು ಕಾವಲು ಕಾಯಲು ಅಲ್ವಾ? ನನ್ನನ್ನು ಹೊರಗೆ ಕಳುಹಿಸುತ್ತೀರಾ?’ ಎಂದುಕೇಳಿದ್ದಾರೆ.
ಈ ವೇಳೆ ಕೆಲವರು ‘ಹಾವನ್ನು ಬಿಟ್ಟುಬಿಡಿ’ ಎಂದು ಸ್ನೇಕ್ ಕಿರಣ್‌ಗೆ ಹೇಳಿದ್ದು, ‘ಆ ತರಹ ಏನೂ ಆಗೊಲ್ಲ’ ಎಂದು ಹೇಳಿ ಹಿಡಿದಿದ್ದ ಹಾವನ್ನು ಅಲ್ಲಿಂದ ದೂರ ಒಯ್ದಿದ್ದಾರೆ. ಕೆಲ ಹೊತ್ತಿನ ನಂತರ ಮಹಿಳೆಯರು ಸಹಜ ಸ್ಥಿತಿಗೆ ಬಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.