ADVERTISEMENT

ಕೇತುಗ್ರಸ್ಥ ಗ್ರಹಣ: ಕೌತುಕದಿಂದ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2022, 4:27 IST
Last Updated 26 ಅಕ್ಟೋಬರ್ 2022, 4:27 IST
ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್‌ನಲ್ಲಿ ಮಂಗಳವಾರ ಕೇತುಗ್ರಸ್ಥ ಸೂರ್ಯಗ್ರಹಣವನ್ನು ಟೆಲಿಸ್ಕೋಪ್ ಮೂಲಕ ಆಸಕ್ತರು ವೀಕ್ಷಣೆ ಮಾಡಿದರು
ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್‌ನಲ್ಲಿ ಮಂಗಳವಾರ ಕೇತುಗ್ರಸ್ಥ ಸೂರ್ಯಗ್ರಹಣವನ್ನು ಟೆಲಿಸ್ಕೋಪ್ ಮೂಲಕ ಆಸಕ್ತರು ವೀಕ್ಷಣೆ ಮಾಡಿದರು   

ಶಿವಮೊಗ್ಗ: ದೀಪಾವಳಿ ಅಮಾವಾಸ್ಯೆ ದಿನವಾದ ಮಂಗಳವಾರ ನಡೆದ ಕೇತುಗ್ರಸ್ಥ ಸೂರ್ಯಗ್ರಹಣವನ್ನು ನಗರದ ಜನತೆ ಕುತೂಹಲದಿಂದ ವೀಕ್ಷಿಸಿದರು. ಇಲ್ಲಿನ ಫ್ರೀಡಂ ಪಾರ್ಕ್ ನಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

ಕರ್ನಾಟಕ ವಿಜ್ಞಾನ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕದಿಂದ ಗ್ರಹಣ ವೀಕ್ಷಣೆಗೆ ಟೆಲಿಸ್ಕೋಪ್ ವ್ಯವಸ್ಥೆ ಮಾಡಲಾಗಿತ್ತು. ಮೌಢ್ಯ ತೊರೆದು ಗ್ರಹಣ ವೀಕ್ಷಿಸಲು ವಿಜ್ಞಾನ ಪರಿಷತ್ ಮನವಿ ಮಾಡಿಕೊಂಡಿತ್ತು. ಅದಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆಯೂ ದೊರೆಯಿತು.

ಗ್ರಹಣ ಸಮಯದಲ್ಲಿ ಖಾರ, ಮಂಡಕ್ಕಿ, ಸ್ವೀಟ್ ತಿಂದು ಮೌಢ್ಯವ ಮೀರಿದರು. ಸೂರ್ಯಗ್ರಹಣ
ಶಿವಮೊಗ್ಗದಲ್ಲಿ ಶೇ 20 ರಷ್ಟು ಮಾತ್ರ ಕಂಡಿತು. ಮಕ್ಕಳು, ಮಹಿಳೆಯರು ಗ್ರಹಣ ನೋಡಿ ಸಂತೋಷ ಪಟ್ಟರು.

ADVERTISEMENT

ಹವ್ಯಾಸಿ ಖಗೋಳ ವೀಕ್ಷಕ ಹಾರೋನಹಳ್ಳಿ ಸ್ವಾಮಿ ನೇತೃತ್ವದಲ್ಲಿ ಗ್ರಹಣ ವೀಕ್ಷಣೆ ಮಾಡಲಾಗಿತ್ತು. ಗ್ರಹಣ ವೀಕ್ಷಣೆಗೆ ಆಗಾಗ ಮೋಡ
ಅಡ್ಡಿಪಡಿಸುತ್ತಿತ್ತು.

ಕೇತುಗ್ರಸ್ಥ ಗ್ರಹಣದ ಅವಧಿಯಲ್ಲಿ ಬಹುತೇಕ ಅಂಗಡಿ, ಹೋಟೆಲ್ ಮತ್ತು ದೇವಸ್ಥಾನ ಬಂದ್ ಆಗಿದ್ದವು. ಹೀಗಾಗಿ ಹಬ್ಬದ ಸಂಭ್ರಮಕ್ಕೆ ಕೆಲ ಹೊತ್ತು ಮಂಕು ಕವಿದಿತ್ತು. ಬಹಳಷ್ಟು ಕಡೆ ಹೋಟೆಲ್, ಬೇಕರಿಗಳನ್ನೂ ಸಹ ಬಂದ್ ಮಾಡಲಾಗಿದೆ. ಸಂಜೆ ಸುಮಾರು 5.12 ಕ್ಕೆ ಹಿಡಿದ ಗ್ರಹಣ ಸರಿಸುಮಾರು ಒಂದು ಗಂಟೆಯವರೆಗೆ ಹಿಡಿದಿತ್ತು. ಅದರ ಹಿನ್ನಲೆಯಲ್ಲಿ ಬಹುತೇಕ ಅಂಗಡಿ ಗಳು ಬಂದ್ ಆಗಿದ್ದವು. ಚಿತ್ರಮಂದಿರಗಳು ಸಹ ಬಂದ್ ಆಗಿದ್ದವು. ಗ್ರಹಣ ಮುಗಿದ ನಂತರ ಇಲ್ಲಿನ ದುರ್ಗಿಗುಡಿಯ ಶನೇಶ್ವರ ದೇವಸ್ಥಾನದಲ್ಲಿ ಗ್ರಹಣ ಶಾಂತಿ ಹೋಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.